ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧೆಯಿಲ್ಲ

Mainashree
Updated On : 28 Jan 2014, 10:27 am

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು. ಮಂಗಳವಾರ ಮೈಸೂರಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲೇಬೇಕೆಂದು ಕಾಂಗ್ರೆಸ್ ಪಕ್ಷ ಛಲ ವಹಿಸಿತು. ಸಂಸತ್ತಿನಲ್ಲಿ ಅದರ ಅನುಮೋದನೆಯಾಗಿದ್ದು, ರಾಷ್ಟ್ರಪತಿಗಳ ಅಂಕಿತ ಮಾತ್ರ ಬಾಕಿ ಉಳಿದಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಪಕ್ಷವೇ. ಹಾಗಾಗಿ ರಾಹುಲ್‌ಗಾಂಧಿ ಅವರನ್ನು ಬಿಜೆಪಿ ಟೀಕಿಸಲು ಯಾವ ನೈತಿಕತೆಯೂ ಇಲ್ಲ ಎಂದರು. ದಕ್ಷಿಣ ಕನ್ನಡದಲ್ಲಿ ನನ್ನ ಮಗ ಹರ್ಷ ಮೊಯ್ಲಿ ಸ್ಪರ್ಧಿಸುವುದಕ್ಕೆ ನನ್ನ ಪ್ರೋತ್ಸಾಹವಿಲ್ಲ. ಆತನಿಗೆ ಪಕ್ಷದಿಂದ ಟಿಕಟ್ ಕೊಡುವ ಬಗ್ಗೆ ಏನೂ ಮಾಹಿತಿಯಿಲ್ಲ. ಚುನಾವಣೆಗೆ ನಿಲ್ಲುವಂತೆ ಅಲ್ಲಿನ ಜನರ ಒತ್ತಾಯವಿದೆ ಎಂಬುದಷ್ಟೆ ನನಗೆ ತಿಳಿದಿರುವ ಸಂಗತಿ ಎಂದು ಹೇಳಿದರು.
12 ಸಿಲಿಂಡರ್: ರಾಹುಲ್ ಗಾಂಧಿ ಅವರು 12 ಎಲ್‌ಪಿಜಿ ಸಿಲಿಂಡರ್ ನೀಡುವಂತೆ ತಿಳಿಸಿರುವ ಹಿನ್ನೆಲೆಯಲ್ಲಿ ಅದನ್ನು ಅನುಷ್ಠಾನಗೊಳಿಸಲಾಗುವುದು. ಈ ಸಂಬಂಧ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement