ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ

Mainashree
Updated On : 28 Jan 2014, 10:27 am

ಮೈಸೂರು: ನಗರ ಪೊಲೀಸ್ ಆಯೋಜಿಸಿದ್ದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಮಂಗಳವಾರ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ಸಪ್ತಾಹದ ಸಮಾರೋಪ ಅಂಗವಾಗಿ ನಡೆದ ಈ ಚಿತ್ರ ಬರೆಯುವ ಸ್ಪರ್ಧೆಗೆ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಚಾಲನೆ ನೀಡಿದರು. ಸ್ಪರ್ಧೆಯು 1 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ, 8 ರಿಂದ 10ನೇ ತರಗತಿ ಮತ್ತು ಪ್ರಥಮ ಹಾಗೂ ದ್ವಿತೀಯ ಪಿಯು ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ನಗರದ ವಿವಿಧ ಶಾಲಾ- ಕಾಲೇಜಿನ ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಂಚಾರಿ ಸೂಚನಾ ಫಲಕಗಳು, ಸೂಚನಾ ದೀಪಗಳು, ಸಂಚಾರ ವ್ಯವಸ್ಥೆಯ ಸಾಲು (ಲೈನ್), ಝೀಬ್ರಾ ಪಟ್ಟಿಯ ಮೇಲೆ ಪಾದಚಾರಿಗಳು ನಡೆದಾಡುವುದು ಸೇರಿದಂತೆ ಅನೇಕ ವಸ್ತು ವಿಷಯವನ್ನು ಈ ಸ್ಪರ್ಧೆ ಒಳಗೊಂಡಿತ್ತು. ವಿಜೇತ ಮಕ್ಕಳಿಗೆ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಬಹುಮಾನ ವಿತರಿಸಿದರು. ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಂ.ಎಂ. ಮಹದೇವಯ್ಯ, ಸಿಎಆರ್ ಡಿಸಿಪಿ ಬಿ. ಶಿವಣ್ಣ, ಸಂಚಾರ ವಿಭಾಗದ ಎಸಿಪಿ ಪ್ರಭಾಕರ್ ಬರ್ಕಿ, ಎನ್‌ಆರ್ ವಿಭಾಗದ ಎಸಿಪಿ ಜಗದೀಶ್, ಇನ್‌ಸ್ಪೆಕ್ಟರ್ ಅಶೋಕ್, ನಾಗೇಗೌಡ, ಮಹಮ್ಮದ್ ಇರ್ಷದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement