ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ
ಸುತ್ತೂರು: ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿರುವ ವಿಜ್ಞಾನ ವಸ್ತುಪ್ರದರ್ಶನವನ್ನು ಮಾಜಿ ಶಾಸಕ ಮಹಿಮಾ ಪಟೇಲ್ ಉದ್ಘಾಟಿಸಿದರು. ಪ್ರದರ್ಶನದಲ್ಲಿ ಶಕ್ತಿ ಮತ್ತು ಪರಿಸರ, ಮಾಹಿತಿ ವಿಜ್ಞಾನ ಮತ್ತು ಮುಂದುವರಿದ ತಂತ್ರಜ್ಞಾನ, ಮನರಂಜನೆಯ ಮೂಲಕ ವಿಜ್ಞಾನ, ಗಣಿತದ ಮಾದರಿಗಳು, ಆಹಾರ ಮತ್ತು ಪೌಷ್ಟಿಕತೆ, ಜೀವವೈವಿಧ್ಯತೆ ಮತ್ತು ಜೈವಿಕ ತಂತ್ರಜ್ಞಾನ, ಭೂ ವಿಜ್ಞಾನ, ಕೃಷಿ, ಸಾರಿಗೆ ಮತ್ತು ಸಂಪರ್ಕ, ಸಾಹಿತ್ಯ, ಜೀವನ, ಸಾಮಾನ್ಯ ಸಮಾಜ ವಿಜ್ಞಾನ, ಸಾಮಾನ್ಯ ವಿಜ್ಞಾನ, ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಜೆಎಸ್ಎಸ್ ವಿಜ್ಞಾನ ಮತ್ತು ಸಮಾಜ ಪ್ರತಿಷ್ಠಾನದ ನಿರ್ದೇಶಕ ಪ್ರೊ.ಕೆ. ಸಿದ್ದಪ್ಪ, ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ.ಶಾಂತಯ್ಯ, ಉಪನಿರ್ದೇಶಕ ಎಚ್.ವಿ. ಶೇಷಗಿರಿರಾವ್ ಇದ್ದರು.