ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಹಿತ್ಯದ ಮೂಲಕ ಜಿಎಸ್ಎಸ್ ಜೀವಂತ

Rashmi Kasaragodu
Updated On : 30 Jan 2014, 1:31 am

ಮೈಸೂರು: ಜಿಎಸ್ಎಸ್ ಅವರಂತಹ ಬಹುಮುಖ ವ್ಯಕ್ತಿ ಜೀವಂತವಾಗಿ ನಮ್ಮ ನಡುವೆ ಇಲ್ಲದಿದ್ದರೂ ಅವರ ಸಾಹಿತ್ಯ ಕೃತಿಗಳ ಮೂಲಕ ಜೀವಂತವಾಗಿದ್ದಾರೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಸಂಶೋಧಕಿ ಡಾ.ವೈ.ಸಿ. ಭಾನುಮತಿ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಕಾಲೇಜಿನ ಕನ್ನಡ ಸಂಘ ಜಂಟಿಯಾಗಿ ಬುಧವಾರ ಕಾಲೇಜಿನ ಜಯಲಕ್ಷ್ಮಮ್ಮಣಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಿ.ಎಸ್.ಶಿವರುದ್ರಪ್ಪ ಅವರು ಕಾವ್ಯ, ಪದ್ಯ, ಮೀಮಾಂಸೆ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೆ ಅಧ್ಯಯನದ ಬಗ್ಗೆ ಅವರಿಗಿದ್ದ ಆಸಕ್ತಿ ಅವರನ್ನು ಆ ಮಟ್ಟಕ್ಕೆ ಬೆಳೆಸಿತು. ನಮ್ಮ ನಡುವೆ ಅವರು ದೈಹಿಕವಾಗಿ ಇಲ್ಲವಾದರೂ, ತಮ್ಮ ಕೃತಿಗಳ ಮೂಲಕ ಜೀವಂತವಾಗಿದ್ದಾರೆ ಎಂದು ಅವರು ಹೇಳಿದರು.
ಜಿಎಸ್ಎಸ್ ಇತರೆ ಸಾಹಿತಿಗಳಿಗಿಂತ ಭಿನ್ನರು. ತಮ್ಮ ಜೀವನದ ಕೊನೆಯವರೆಗೂ ಕುವೆಂಪು ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕುವೆಂಪು ಅವರ ಬರವಣಿಗೆಯಿಂದ ಪ್ರೇರಿತರಾಗಿ, ವಿವಿಧ ಪ್ರಕಾರಗಳ ಕೃತಿ ರಚಿಸಿದ್ದಾರೆ ಎಂದರು.
ಜಿಎಸ್ಎಸ್ ಅವರ ಪುಸ್ತಕ ಪ್ರದರ್ಶನ, ಜಿಎಸ್ಎಸ್ ಗೀತಗಾಯನ ಹಾಗೂ ಸಾಕ್ಷ್ಯಚಿತ್ರ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಾ. ವರದರಾಜು, ಪ್ರೊ.ಟಿ.ಎಲ್. ಜಗದೀಶ್, ಕೃಪಾಮಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement