ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುತ್ತೂರು ಜಾತ್ರೆಯಲ್ಲಿ ತೇರು ಎಳೆದ ಭಕ್ತರು

Rashmi Kasaragodu
Updated On : 30 Jan 2014, 1:34 am

ಕ.ಪ್ರ.ವಾರ್ತೆ    ಸುತ್ತೂರು    ಜ. 29
ಸುತ್ತೂರು ಮಠದ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ವಿಜೃಂಭಣೆಯ ರಥೋತ್ಸವ ನಡೆಯಿತು.
ಶ್ರೀಕ್ಷೇತ್ರದ ಗದ್ದುಗೆ ದೇವಸ್ಥಾನದ ಮುಂಭಾಗ ಬೆಳಗ್ಗೆ ಆರಂಭವಾದ ಈ ಉತ್ಸವವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
ಹೊಸಮಠದ ಚಿದಾನಂದ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಪಡಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ಮಹದೇಶರಬೆಟ್ಟದ ಸಾಲೂರು ಮಠದ ಗುರುಸ್ವಾಮೀಜಿ, ಬೆಟ್ಟದಪುರ ಸಲೀಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಇದ್ದರು.
ಶಿವಯೋಗಿಗಳ ಬೆಳ್ಳಿಮೂರ್ತಿಯ ವಿಗ್ರಹ ಹೊತ್ತು ಅಲ್ಲಿಂದ ತೆರಳಿದ ಅಲಂಕೃತ ತೇರನ್ನು ಭಕ್ತಾದಿಗಳು ಎಳೆದು ಪುನೀತರಾದರು. ಮಾರ್ಗದುದ್ದಕೂ ಹಣ್ಣು ಜವನ ಎಸೆದು ಸಾರ್ವಜನಿಕರು ಶ್ರದ್ಧಾಭಕ್ತಿ ಮೆರೆದರು.  
ಉತ್ಸವದಲ್ಲಿ ಸುತ್ತೂರಿನ ಶಿವರಾತ್ರೀಶ್ವರ ತಂಡದ ನಂದಿಧ್ವಜ, ನಂಜನಗೂಡು ಚಿಕ್ಕಣ್ಣ, ಗುಂಡ್ಲುಪೇಟೆಯ ಮಹದೇವಯ್ಯ, ಚಿನ್ನಪ್ಪ ಹಾಗೂ ನಂಜನಗೂಡಿನ ಶಿವನಂಜಯ್ಯ ಅವರ ನಾದಸ್ವರ, ಮಂಡ್ಯ ಜಿಲ್ಲೆಯ ಎಚ್.ಎ. ನಿಂಗರಾಜು, ಪ್ರಸನ್ನಕುಮಾರ್ ಹಾಗೂ ಶ್ರೀರಂಗಪಟ್ಟಣದ ಆರ್.ಪ್ರಭಾಕರ್ ತಂಡದ ಸಾಕ್ಸೋಫೋನ್ ವಾದನ ಹಾಗೂ ಸುತ್ತೂರಿನ ನಿಂಗದಾಸಯ್ಯ ಹಾಗೂ ಕಲ್ಕುಂದದ ಲಕ್ಷ್ಮಯ್ಯ ತಂಡದವರ ಕೊಂಬು ಕಹಳೆ ಮೊಳಗಿತು.   
ಮೈಸೂರಿನ ಕಿರಾಳು ಮಹೇಶ್ ಹಾಗೂ ಮಂಡ್ಯದ ಎನ್.ಮಹದೇವಪ್ಪ ತಂಡದವರು ವೀರಗಾಸೆ ನೃತ್ಯವನ್ನೂ, ಮಹದೇವಶೆಟ್ಟಿ ತಂಡದವರು ಕಂಸಾಳೆ ನೃತ್ಯವನ್ನೂ, ಗದಗಿನ ಸಿದ್ದಪ್ಪ ಜು. ಖ್ಯಾಡಾದ್ ತಂಡದವರು ಜಗ್ಗಲಿಕೆ, ಚಾಮರಾಜನಗರದ ಎಂ.ಆರ್. ಶಿವಮಲ್ಲೇಗೌಡ ತಂಡದ ಗೊರವರ ಕುಣಿತ, ಟಿ. ನರಸೀಪುರದ ಸಿದ್ದಮ್ಮ ತಂಡದ ಕಳಸ ಕುಣಿತ, ಮಂಡ್ಯದ ಹೊನ್ನಯ್ಯ ತಳಗವಾಡಿ ತಂಡದ ಕೊರವಂಜಿ ಕೋಲಾಟ ಮುಂತಾದ ಜನಪದ ತಂಡಗಳು ಕಲಾ ಪ್ರದರ್ಶನ ನೀಡಿದರು. ನವಿಲು ನೃತ್ಯ, ಗಾರಡಿ ಗೊಂಬೆ, ಹುಲಿ ವೇಷಧಾರಿಗಳು ಹಾಗೂ ಮರಗಾಲು ಮನುಷ್ಯ  ಮನರಂಜನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement