ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಣ್ಯರ ಹೆಸರಲ್ಲಿ ವಂಚನೆ: ವ್ಯಕ್ತಿ ಸೆರೆ

Rashmi Kasaragodu
Updated On : 31 Jan 2014, 1:13 am

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಗಣ್ಯರ ಹೆಸರು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಲಕ್ಷ್ಮಿಪುರಂ ಠಾಣೆ ಪೊಲೀಸರು ಗುರುವಾರ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
  ಟಿ. ನರಸೀಪುರದ ನಿವಾಸಿ ರಾಮಸ್ವಾಮಿ ಎಂಬವರ ಪುತ್ರ ವೇಲುಸ್ವಾಮಿ (52) ಬಂಧಿತ ಆರೋಪಿ. ಈತನು ಕೆಲಸ ಹುಡುಕುವ ನಿರುದ್ಯೋಗಿಗಳನ್ನು, ಅಮಾಯಕರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ.
 ತನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಕೇಂದ್ರ ರೇಲ್ವೆ ಸಚಿವರು, ಕೈಗಾರಿಕಾ ಸಚಿವರು ಸೇರಿ ಇನ್ನಿತರೆ ರಾಜಕೀಯ ಮುಖಂಡರ ಪರಿಚಯವಿದೆ. ಹಣ ಕೊಟ್ಟರೆ ಮೈಮುಲ್, ರೇಲ್ವೆ ಸೇರಿದಂತೆ ವಿವಿಧೆಡೆ ಕೆಲಸ ಕೊಡಿಸುವುದಾಗಿ ಹೇಳುತ್ತಿದ್ದಾಗಿ ಹೂಟಗಳ್ಳಿ ಕೆಎಚ್ಬಿ ಕಾಲೋನಿ ಚಂದ್ರಪ್ಪ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಮುಲ್ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನನ್ನನ್ನು ನಂಬಿಸಿ ಹಾರ್ಡಿಂಜ್ ವೃತ್ತದ ಬಳಿ ಬರಲು ತಿಳಿಸಿದ್ದ. ಅದರಂತೆ ಹಾರ್ಡಿಂಜ್ ವೃತ್ತಕ್ಕೆ ಹೋದಾಗ ಆತ ಕುಡಿದು ಮಲಗಿದ್ದ. ಆತನನ್ನು ಉಪಾಯವಾಗಿ ಮಹಾರಾಜ ಕಾಲೇಜು ಮೈದಾನದ ಬಳಿಗೆ  ಚಂದ್ರಪ್ಪ ಅವರು ಕರೆದುಕೊಂಡು ಬಂದಿದ್ದಾರೆ. ನಂತರ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೇಲುಸ್ವಾಮಿಯನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement