ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಾರಂಪರಿಕ ನಡಿಗೆ...

Rashmi Kasaragodu
Updated On : 31 Jan 2014, 1:17 am

ಕ.ಪ್ರ.ವಾರ್ತೆ    ಮೈಸೂರು    ಜ. 30
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಗರದಲ್ಲಿ ಇದುವರೆಗೆ ಕೈಗೊಂಡ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕಿಂತ ಗುರುವಾರ ನಡೆದ ಪಾರಂಪರಿಕ ನಡಿಗೆ ವಿಶೇಷವಾಗಿತ್ತು.
ಇದುವರೆಗಿನ ಕಾರ್ಯಕ್ರಮದಲ್ಲಿ ವಿದೇಶಿಯರು, ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಳ್ಳುತ್ತಿದ್ದರು. ಆದರೆ ಗುರುವಾರ ವಿವಿಧ ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ದು ವಿಶೇಷ ಎನಿಸಿತು.
ನಗರದ ಆಡಳಿತಾತ್ಮಕ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಗಮಿಸಿರುವ ನಾನಾ ಭಾಗದ ಚುನಾಯಿತ ಪ್ರತಿನಿಧಿಗಳು. ಚಳ್ಳಕೆರೆ ಪುರಸಭೆಯ 10, ಕೊರಟೆಗೆರೆ ಪಪಂನ 10, ಕುಂದಾಪುರ ಪುರಸಭೆಯ 8, ಸೋಮವಾರಪೇಟೆ ಪಪಂನ 6 ಮತ್ತು ಸಕಲೇಶಪುರ ಪುರಸಭೆಯ 10 ಮಂದಿ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ರಂಗಾಚಾರ್ಲು ಪುರಭವನದಿಂದ ಆರಂಭವಾದ ನಡಿಗೆ ಚಾಮರಾಜೇಂದ್ರ ವೃತ್ತ, ಅರಮನೆ, ಕೆ.ಆರ್. ವೃತ್ತ, ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ ಮೂಲಕ ಅಶೋಕ ರಸ್ತೆ ತಲುಪಿತು.
ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ, ಪ್ರೊ.ಎನ್.ಎಸ್. ರಂಗರಾಜು, ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement