ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಗರ್ಹುಕುಂ ಸಕ್ರಮಕ್ಕೆ ಒತ್ತಾಯ

Rashmi Kasaragodu
Updated On : 31 Jan 2014, 1:12 am

ಮೈಸೂರು: ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸಲು ಆಗ್ರಹಿಸಿ ಬಿಎಸ್ಪಿ ಕಾರ್ಯಕರ್ತರು ನಗರದ ನಜರ್ಬಾದ್ನಲ್ಲಿರುವ ಮೈಸೂರು ತಾಪಂ ಕಚೇರಿ (ಮಿನಿ ವಿಧಾನಸೌಧ) ಎದುರು ಗುರುವಾರ ಪ್ರತಿಭಟಿಸಿದರು.
ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಿ ಪರಿಶಿಷ್ಟರು, ಹಿಂದುಳಿದ ವರ್ಗ ಮತ್ತು ಭೂರರಹಿತರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, ನಮೂನೆ 50, 53ರ ಪ್ರಕಾರ ಅರ್ಜಿ ಸಲ್ಲಿಸಿರುವ ಭೂಮಿಯನ್ನು ಸಕ್ರಮಗೊಳಿಸಬೇಕು. ಆ ರೈತರಿಗೆ ಸಾಗುವಳಿ ಪತ್ರ ನೀಡಬೇಕು. 1991 ಮತ್ತು 1999ರ ಅವಧಿಯಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಹಾಗೂ ನಂತರದ ದಿನಗಳಲ್ಲಿ ಬಗರ್ಹುಕುಂ ಸಾಗುವಳಿ ಮಾಡುತ್ತಿರುವ ಭೂ ರಹಿತರ ಮತ್ತು ಸಣ್ಣ ಹಿಡುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು. ಸರ್ಕಾರ ಭೂ ನ್ಯಾಯ ಮಂಡಳಿ ರಚಿಸಬೇಕು. ಮೈಸೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಮಾದೇವು, ಮುಖಂಡರಾದ ಭೀಮನಹಳ್ಳಿ ಸೋಮೇಶ್, ನಾಗರಾಜು, ಪಿ. ಚಂದ್ರಶೇಖರ್, ಮೋಹನ್, ದಿನಕರ್, ಪುಟ್ಟಸ್ವಾಮಿ, ಮಹಾದೇವಯ್ಯ, ಪ್ರವೀಣ್, ನಾರಾಯಣ, ಮಹೇಶ್, ಸ್ವಾಮಿ, ಲೋಕೇಶ್, ಸುರೇಶ್, ಎಸ್ಡಿಪಿಐ ಮುಖಂಡರಾದ ಶಬ್ಬೀರ್ ಕಿರಣ್, ಕುಮಾರಸ್ವಾಮಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.                                                                    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement