ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತ್ತೆ ರಂಗೇರಿದ 'ಚಾಮ ಚೆಲುವೆ'ನಾಳೆಯಿಂದ ನಾಲ್ಕು ಪ್ರದರ್ಶನ

Rashmi Kasaragodu
Updated On : 31 Jan 2014, 1:09 am

ಮೈಸೂರು: ಕೃತಿಚೌರ್ಯ ವಿವಾದದಲ್ಲಿ ಸಿಲುಕಿ ಪ್ರದರ್ಶನ ಮೊಟಕು ಮಾಡಿದ್ದ ನಟನ ಸಂಸ್ಥೆಯ 'ಚಾಮ ಚೆಲುವೆ' ನಾಟಕವು ಈಗ ಕೆಲವು ಬದಲಾವಣೆ ಮಾಡಿಕೊಂಡು ಮತ್ತೊಮ್ಮೆ ರಂಗದ ಮೇಲೆ ಬರುತ್ತಿದೆ. ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲತೆಯಿಂದ ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಟತೆ ಸಾಧಿಸುವತ್ತ ಸತತವಾಗಿ ಪ್ರಯತ್ನಿಸುತ್ತಿರುವ ನಟನವು ಕನ್ನಡ ಜಾನಪದ ಹಾಡುಗಳ ಸತ್ವದಿಂದ ಮೈದಳೆದಿರುವ ಚಾಮ ಚೆಲುವೆಯನ್ನು ರಂಗಾಸಕ್ತರಿಗೆ ಉಣಬಡಿಸಲು ಸಿದ್ದತೆ ನಡೆಸಿದೆ. ಫೆ. 1 ರಿಂದ 4 ರವರೆಗೆ ಪ್ರತಿದಿನ ಸಂಜೆ 7ಕ್ಕೆ ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕದಲ್ಲಿ ಪ್ರದರ್ಶನ ಏರ್ಪಡಿಸಿದೆ. ಮೊ. 94804 68327 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement