ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ಕಾರಿ ಆಸ್ತಿ ರಕ್ಷಣೆ ಅಧಿಕಾರಿಗಳ ಹೊಣೆ

Rashmi Kasaragodu
Updated On : 31 Jan 2014, 1:12 am

ಹುಣಸೂರು: ಒತ್ತುವರಿಯಾದ ಕೆರೆ, ಕಟ್ಟೆ, ಅರಣ್ಯ ಪ್ರದೇಶ ಸೇರಿದಂತೆ ಯಾವುದೇ ಸರ್ಕಾರಿ ಆಸ್ತಿ ಒತ್ತುವರಿಯಾಗಿದ್ದಲ್ಲಿ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ರಕ್ಷಿಸಬೇಕು. ಈ ವಿಷಯದಲ್ಲಿ ಸಾರ್ವಜನಿಕರು ದೂರು ನೀಡುವ ಅವಶ್ಯಕತೆ ಇಲ್ಲ ಎಂದು ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಸಾರ್ವಜನಿಕರ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರದ ಆಸ್ತಿ ಒತ್ತುವರಿ ಮತ್ತು ರಕ್ಷಣೆ ವಿಚಾರದಲ್ಲಿ ಸಾರ್ವಜನಿಕರು ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಬೇಕೆಂಬ ನಿಲುವು ಕೈಬಿಟ್ಟು, ಸರ್ಕಾರದ ಆಸ್ತಿ ಕಾಪಾಡುವುದು ನಮ್ಮ ಕರ್ತವ್ಯ ಎಂಬ ಭಾವನೆಯಿಂದ ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂದರು.
ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ನಿವಾಸಿಗಳು ನೆರ ಹೊರೆಯವರು ಜಮೀನು, ಮನೆ, ನಿವೇಶನ, ಚರಂಡಿ, ರಸ್ತೆ, ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಬಹುತೇಕ ದೂರು ದಾಖಲಾಗಿವೆ.
ಹುಣಸೂರು ಉಪ ವಿಭಾಗದ ಮಟ್ಟದಲ್ಲಿ ಪ್ರಥಮ ಬಾರಿಗೆ ಉಪ ಲೋಕಾಯುಕ್ತರು ನಡೆಸಿದ ವಿಚಾರಣೆಯಲ್ಲಿ ಈ ಹಿಂದೆ 165 ಪ್ರಕರಣಗಳು ದಾಖಲಾಗಿದ್ದವು. ಕಳೆದ ಮೂರು ದಿನಗಳಿಂದ 85 ಪ್ರಕರಣ ದಾಖಲಾಗಿವೆ. ಕೆ.ಆರ್. ನಗರ ತಾಲೂಕಿನ 80 ವರ್ಷದ ಸಾಕಮ್ಮ ಪೌತಿ ಖಾತ ಮಡುವ ಬಗ್ಗೆ ತಕಾರರು ಇದ್ದು, ಹೈಕೋರ್ಟ್ನಲ್ಲಿ  ದಾವೆ ಇದೆ. ಇತ್ತ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡಿ ಅವರು ನ್ಯಾಯಾಲಯದ ತೀರ್ಪಿನ ಬಳಿಕ ಖಾತೆ ಮಾಡಿಕೊಡುವಂತೆ ಸೂಚಿಸಿದರು.
ಎಸ್ಐಗೆ ತರಾಟೆ: ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ಲಕ್ಕಿಕುಪ್ಪೆಯಲ್ಲಿ ನಡೆದಿದ್ದ ಆಸ್ತಿ ವಿಚಾರದ ಪ್ರಕರಣದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ದೇವಿರಮ್ಮ ಎಂಬವರ ಪುತ್ರ ಶಾಂತಕುಮಾರ್ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಿದ್ದರಿಂದ ಆತನ ಕೆಲಸ ಹೋಗಿದೆ ಎಂದು ದೇವಿರಮ್ಮ ದೂರಿದರು.
ಇದರಿಂದ ಕೋಪಗೊಂಡ ನ್ಯಾಯಾಧೀಶರು ಸಾಲಿಗ್ರಾಮ ಪೊಲೀಸ್ ಠಾಣೆ ಎಸ್ಐ ಶಿವನಂಜಯ್ಯ ಅವರನ್ನು ಉದ್ದೇಶಿಸಿ ಕಾನೂನು ತಿಳಿದಿಲ್ಲ ಆಂದ ಮೇಲೆ ಏಕೆ ಕೆಲಸಕ್ಕೆ ಬರುತ್ತಿರಿ? ಅಮಾಯಕರನ್ನು ಏಕೆ ಬಲಿ ತೆಗೆದುಕೊಳ್ಳುತ್ತಿರಾ? ಎಂದು ತಾರಾಟೆಗೆ ತೆಗೆದುಕೊಂಡರು. ಬಳಿಕ ಯುವಕನಲ್ಲಿ ಕ್ಷಮೆಯಾಚಿಸುವಂತೆ ಸೂಚಿಸಿ, ಆತನ ಮೇಲಿರುವ ಪ್ರಕರಣ ಸರಿಪಡಿಸುವಂತೆ ಎಸ್ಪಿಗೆ ಸೂಚಿಸಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement