ಸ್ವಾತಂತ್ರ್ಯ ಯೋಧರಿಂದ ನಮನ...
ಮೈಸೂರು: ಅರವತ್ತಾರನೇ ಸರ್ವೋದಯ ದಿನಾಚರಣೆಯನ್ನು ಮೈಸೂರು ಸ್ವಾತಂತ್ರ್ಯ ಹೋರಾಟಗಾರರ ಸಂಘವು ಸುಬ್ಬರಾಯನಕೆರೆ ಆವರಣದಲ್ಲಿ ಗುರುವಾರ ಆಚರಿಸಿತು.
ಸಂಘದ ಅಧ್ಯಕ್ಷ ಜಗದೀಶ್ ಅವರು ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಾಧ್ಯಕ್ಷ ಡಾ.ಎಂ.ಜಿ. ಕೃಷ್ಣಮೂರ್ತಿ, ಉಪಾಧ್ಯಕ್ಷ ಜಯಸಿಂಹ, ಕಾರ್ಯದರ್ಶಿ ಎಂ.ಆರ್. ರಾಮಶೇಷು, ಸದಸ್ಯರಾದ ದೊಡ್ಡೇಗೌಡ, ಸಮಾಜವಾದಿ ಪಕ್ಷದ ಮುಖಂಡ ಕರುಣಾಕರನ್ ಮತ್ತಿತರರು ಇದ್ದರು.