ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಡಾನೆ ದಾಳಿ: ಬೆಳೆಗೆ ಹಾನಿ

Mainashree
Updated On : 31 Jan 2014, 9:14 am

ಹುಣಸೂರು:  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರವನ್ನಾರಸಿ ನಾಡಿಗೆ ಬಂದ 5 ಕಾಡಾನೆಗಳ ಹಿಂಡು, ರೈತ ಬೆಳೆದ ಬಾಳೆ ಹಾಗೂ ಕಬ್ಬು ಬೆಳೆಯನ್ನು ತಿಂದು ತುಳಿದು ನಾಶಪಡಿಸಿರುವ ಘಟನೆ ಗುರುವಾರ ರಾತ್ರಿ ಜರುಗಿದೆ.
ತಾಲೂಕಿನ ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ರೈತ ಸಿದ್ದಪ್ಪ ತಮ್ಮ ಜಮೀನಿನಲ್ಲಿ ಬಾಳೆ ಹಾಗೂ ಕಬ್ಬು ಬೆಳೆದಿದ್ದು, ಬುಧವಾರ ರಾತ್ರಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಕಲ್ಲೂರಪ್ಪನ ಬೆಟ್ಟದ ಮಾರ್ಗ ಆಹಾರವನ್ನಾರಸಿ ಗ್ರಾಮಕ್ಕೆ ಬಂದ 5 ಕಾಡಾನೆಗಳ ಹಿಂಡು ರೈತ ಸಿದ್ದಪ್ಪ ಬೆಳೆದ ಬಾಳೆ ಹಾಗೂ ಕಬ್ಬು ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ.
ಕಾಡಾನೆಗಳ ದಾಳಿಯಿಂದ ಸುಮಾರು 280ಕ್ಕೂ ಹೆಚ್ಚು ಏಲಕ್ಕಿ ಬಾಳೆಗಿಡ, ಅರ್ಧ ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿ ಸುಮಾರು 50 ಸಾವಿರ ಕ್ಕೂ ಹೆಚ್ಚು ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಹುಣಸೂರಿನ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement