ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕ್ರೆಡಿಟ್‌ಐನಿಂದ ಆರ್ಥಿಕ ನೆರವು

Mainashree
Updated On : 31 Jan 2014, 8:57 am

ಮೈಸೂರು: ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರ (ಕ್ರೆಡಿಟ್-ಐ)  2013-14ನೇ ಸಾಲಿನ ಪ್ರಧಾನ ಯೋಜನೆಯಾದ ನಗರವಾಸಿಗಳ ಆರ್ಥಿಕ ಪುನಶ್ಚೇತನ  ಯೋಜನೆಯ ಭಾಗವಾಗಿ  ಬೆಂಗಳೂರಿನ ನಬಾರ್ಡ್ ಫೈನಾನ್ಸಿಯಲ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಭಾರತ್‌ನಗರದಲ್ಲಿರುವ ಸಮುದಾಯ ಭವನದಲ್ಲಿ ಆರ್ಥಿಕ ನೆರವು ಕಾರ್ಯಕ್ರಮ ನಡೆಯಿತು.
ನಬಾರ್ಡ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ ಜಿಲ್ಲಾ ವ್ಯವಸ್ಥಾಪಕ ಕುಮಾರ್ ಹಾಗೂ ಕ್ರೆಡಿಟ್-ಐ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ. ವರ್ಷ, ಕಲ್ಯಾಣಗಿರಿಯ ಭಾರತ್ ನಗರದ ಲಿಡ್ಕರ್ ಕಾಲೋನಿ ಹಾಗೂ ನೆಹರುನಗರದಲ್ಲಿರುವ ಬಿಸ್ಮಿಲ್ಲಾ ಜಂಟಿ ಬಾಧ್ಯತಾ ಗುಂಪು, ಕಲ್ಯಾಣಗಿರಿ - ರು.1.20 ಲಕ್ಷ   ಮೆಸ್ಸಿಯಾರಾಜ್ ಸ್ವಸಹಾಯ ಸಂಘ, ಭಾರತ್‌ಣನಗರ, ರು.1.80 ಲಕ್ಷ  ಭಾಗ್ಯಜ್ಯೋತಿ ಜಂಟಿ ಬಾಧ್ಯತಾ ಗುಂಪು, ಲಿಡ್ಕರ್ ಕಾಲೋನಿ, ರು.1.05 ಲಕ್ಷ  ಚಾಮುಂಡೇಶ್ವರಿ ಜಂಟಿ ಬಾಧ್ಯತಾ ಗುಂಪು, ಲಿಡ್ಕರ್ ಕಾಲೋನಿ- ರು.1.45 ಲಕ್ಷ  ಸುಹಾನ ಸ್ವಸಹಾಯ ಗುಂಪು, ನೆಹರೂ ನಗರ ರು. 3.50 ಲಕ್ಷ ಆರ್ಥಿಕ ನೆರವು ವಿತರಿಸಿದರು. ನಬಾರ್ಡ್ ಅಧಿಕಾರಿ ರಾಜಶೇಖರ್ ಮೂರ್ತಿ, ಕ್ರೆಡಿಟ್-ಐ ಸಂಸ್ಥೆ ಸಂಯೋಜನಾಧಿಕಾರಿ ಸುಮಲತಾ, ಕ್ಷೇತ್ರ ಕಾರ್ಯಕರ್ತೆ ಪದ್ಮಾ ಇದ್ದರು. ನಗರದ ವಿವಿಧ ಕಾಲೋನಿಗಳಲ್ಲಿರುವ ಸುಮಾರು 150 ಮಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement