'ಚಾಮಚಲುವೆ'ಗೆ ತಡೆ
ಮೈಸೂರು: ಚಾಮ ಚಲುವೆ ನಾಟಕಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತಾತ್ಕಾಲಿಕ ನಿರ್ಬಂಧಾಜ್ಞೆ ಹೊರಡಿಸಿದೆ. ಬೋಗಾದಿ ರಸ್ತೆಯ ಧ್ವನ್ಯಾಲೋಕದಲ್ಲಿ ಆಗಲಿ ಅಥವಾ ಬೇರೆ ಯಾವುದೇ ಸ್ಥಳದಲ್ಲಾಗಲಿ ಚಾಮ ಚಲುವೆ ನಾಟಕ ಪ್ರದರ್ಶಿಸಬಾರದು ಎಂದು ಲೇಖಕಿ ಡಾ. ಸುಜಾತ ಅಕ್ಕಿ, ನಿರ್ದೇಶಕ ಮಂಡ್ಯ ರಮೇಶ್ ಹಾಗೂ ಅವರ ಬೆಂಬಲಿಗರಿಗೆ ಕೋರ್ಟ್ ಸೂಚನೆ ನೀಡಿದೆ.