ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತ್ರಿವಳಿ ಚಿರತೆ ಮರಿಗಳು ಪ್ರತ್ಯಕ್ಷ

Mainashree
Updated On : 31 Jan 2014, 8:58 am

ನಂಜನಗೂಡು: ತಾಲೂಕಿನ ಸುತ್ತೂರಿನ ಸಮೀಪದ ಆಲತ್ತೂರು ಗ್ರಾಮದಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ.
ಗ್ರಾಮದ ಗೌಡಿಕೆ ರಾಜಶೇಖರಪ್ಪ ಎಂಬವರ ಕಬ್ಬಿನ ಗದ್ದೆಯಲ್ಲಿ ಚಿರತೆಯೊಂದು ಮೂರು ಹೆಣ್ಣು  ಮರಿಗಳಿಗೆ ಜನ್ಮ ನೀಡಿದೆ.
 ಚಿರತೆಯು ಆಹಾರವನ್ನು ಹುಡುಕುತ್ತಾ ಬೇರೆ ಕಡೆ ಹೋದ ವೇಳೆ ಕಬ್ಬಿನ ಗದ್ದೆಗೆ ಹೋದ ಗ್ರಾಮಸ್ಥರು ಚಿರತೆ ಮರಿಗಳನ್ನು ಕಂಡು ಭಯಭೀತರಾಗಿ ಊರಿನತ್ತ ದೌಡಾಯಿಸಿದರು. ನಂಜನಗೂಡಿನ ಅರಣ್ಯ ಅಧಿಕಾರಿಗಳಿಗೆ ಕಬ್ಬಿನ ಗದ್ದೆಯಲ್ಲಿದ ಮರಿಚಿರತೆಗಳ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿ ಬಂದ ನಂಜನಗೂಡು ಅರಣ್ಯ ಇಲಾಖೆಯ ಮಹೇಶ್ ಮತ್ತು ಪರಶಿವಮೂರ್ತಿ ಕಬ್ಬಿನ ಗದ್ದೆಗೆ ತೆರಳಿ ಆಹಾರ ತರಲು ಹೋದ ತಾಯಿ ಚಿರತೆ ವಾಪಸ್ಸು ಬರುವುದಕ್ಕೆ ಮುಂಚೆ ಚಿರತೆ ಮರಿಯನ್ನು ತಮ್ಮ ವಶಕ್ಕೆ ಪಡೆದರು. ಇತ್ತ ಮರಿಯನ್ನು ಕಳೆದುಕೊಂಡು ಆಕ್ರೋಶಗೊಳ್ಳಬಹುದಾದ ತಾಯಿ ಚಿರತೆ ಭಯ ಅಲತ್ತೂರು ಗ್ರಾಮಸ್ಥರಿಗೆ ಈಗ ವ್ಯಾಪಿಸಿಕೊಂಡಿದೆ. ಇತ್ತೀಚೆಗೆ ಹುಲಿಯ ಬಾಯಿಗೆ ಸಿಕ್ಕಿದವರ ಕತೆ ಹಸಿ ಇರುವಾಗಲೇ ಈ ಘಟನೆ ನಡೆದಿರುವುದು ಈ ಭಾಗದ ಜನತೆಯ ಭಯ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement