ಬಣ್ಣದ ಕಣಜ ಕೃತಿ ಲೋಕಾರ್ಪಣೆ
ಮೈಸೂರು: ರಂಗಕರ್ಮಿ ರಾಧಾಮೂರ್ತಿ ರಚಿಸಿರುವ ಬಣ್ಣದ ಕಣಜ ರಂಗಭೂಮಿ ಕಲಾವಿದರ ಮಾಹಿತಿ ಕೋಶ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಜಿಲ್ಲಾ ಕಸಾಪ ವತಿಯಿಂದ ನಗರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯ ಸಂಸ್ಥೆ ಕನ್ನಡ ವಿಶ್ವಕೋಶ ಗೌರವ ಸಂಪಾದಕ ಹಾಗೂ ಸಾಹಿತಿ ಬಿ. ಶಾಮಸುಂದರ್ ಲೋಕಾರ್ಪಣೆಗೊಳಿಸಿ, ಇಂತಹ ಕೃತಿಯನ್ನು ಹೊರತಂದಿರುವುದು ರಂಗ ಕಲಾವಿದರಿಗೆ ಉಪಯುಕ್ತ ಎಂದರು.ಸಂಸ್ಕೃತಿ ಪೋಷಕ ಕೆ. ರಘುರಾಂ ಅಧ್ಯಕ್ಷತೆ ವಹಿದ್ದರು. ಮಡ್ಡಿಕೆರೆ ಗೋಪಾಲ್ ಹಾಗೂ ಕಲಾವಿದೆ ಕೆ.ಎಂ. ಗಿರಿಜಮ್ಮ, ಚಂದ್ರಶೇಖರ್, ಡಾ. ವೈ.ಡಿ ರಾಜಣ್ಣ, ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ,ಲೇಖಕ ರಾಧಾಮೂರ್ತಿ ಇದ್ದರು.