ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರಿಗೆ ಸಲಹೆ, ಸೂಚನೆ

Mainashree
Updated On : 31 Jan 2014, 8:57 am

ಮೈಸೂರು: ಜಿಲ್ಲೆಯಲ್ಲಿ ಫೆ.1 ರಿಂದ 4 ರವರೆಗೆ ಮಳೆ ಬರುವ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಯಕ್ಕೆ ಮುಂದಾಗಲು ನಾಗನಹಳ್ಳಿಯ ಸಮಗ್ರ ಕೃಷಿ ಹವಾಮಾನ ವಿಭಾಗದ ತಜ್ಞರು ರೈತರಿಗೆ ಸಲಹೆ ನೀಡಿದ್ದಾರೆ.
ಮುನ್ಸೂಚನೆ ಪ್ರಕಾರ ಈ ವಾರ ಗರಿಷ್ಠ ಉಷ್ಣಾಂಶ 29 - 31 ಮತ್ತು ಕನಿಷ್ಠ ಉಷ್ಣಾಂಶ 17 - 18 ರವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ. 70 ರಿಂದ 73 ರವರೆಗೆ, ಮಧ್ಯಾಹ್ನದ ತೇವಾಂಶ ಶೇ. 27 ರಿಂದ 39 ಮತ್ತು ಗಾಳಿಯು ಗಂಟೆಗೆ ಸರಾಸರಿ 6 -7  ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ವಿಭಾಗದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ತಿಳಿಸಿದ್ದಾರೆ.
ಬದನೆ ಬೆಳೆ ಬಗ್ಗೆ: ಬದನೆ ಕಾಯಿ ಬಿಡುವ ಸಂದರ್ಭದಲ್ಲಿ ತಗಲುವ ಕೊರಕ ಹುಳು ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 4 ಗ್ರಾಂ ಕಾರ್ಬರಿಲ್ ಅಥವಾ ನಿಂಬಿಸಿಡಿನ್ 5 ಮಿ.ಲೀ ಔಷಧಿಯನ್ನು ಬೆರಸಿ ಬೆಳೆಗೆ ಸಿಂಪಡಿಸಬೇಕು.
ರೇಷ್ಮೆ, ಕೋಳಿ ಸಾಕಾಣಿಕೆ: ರೇಷ್ಮೆ ಹಾಗೂ ಕೋಳಿ ಸಾಕಾಣಿಕೆಯ ಕೋಠಡಿಯ ಉಷ್ಣಾಂಶದ ಸ್ಥಿರತೆ ಕಾಪಾಡುವುದರ ಜತೆಗೆ ಕರುಗಳಿಗೆ ಜಂತುನಾಶಕ ಔಷಧಿಯನ್ನು ಪಶು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಡಿಸಬೇಕು.
ಬಿತ್ತನೆ ಬೀಜಗಳ ಬಗ್ಗೆ: ದವಸ ಧ್ಯಾನಗಳ ಕಟಾವು ಮಾಡಿದ ಬಿತ್ತನೆ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ದಾನ್ಯಗಳ ತೇವಾಂಶ ಶೇ.11 ರಿಂದ 12, ದ್ವಿದಳ ದಾನ್ಯಗಳ ತೇವಾಂಶ ಶೇ. 9, ಎಣ್ಣೆಕಾಳಿನ ತೇವಾಂಶ ಶೇ. 8 ಮತ್ತು ತರಕಾರಿ ಬೀಜಗಳ ತೇವಾಂಶ ಶೇ. 5 ರಿಂದ 6 ರಷ್ಟಿರಬೇಕು. ಇದರಿಂದ ಹೆಚ್ಚು ದಿನ ಬೀಜಗಳನ್ನು ಸಂಸ್ಕರಿಸಬಹುದು ಎಂದಿದ್ದಾರೆ.  ಮಾಹಿತಿಗೆ ದೂ. 0821-2591267 ಅಥವಾ 8095227713, ಮೊ. 9343532154 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement