ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಕ್ಕಿಗಾಗಿ ಆದಿವಾಸಿಗಳ ಧರಣಿ

Mainashree
Updated On : 31 Jan 2014, 8:58 am

ಪಿರಿಯಾಪಟ್ಟಣ: ಆದಿವಾಸಿ ಬುಡಕಟ್ಟು ಹಕ್ಕುಗಳ ಅನುಷ್ಟಾನ ಹಾಗೂ ರಕ್ಷಣೆಗಾಗಿ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಸದಸ್ಯರು ತಾಲೂಕು ಆಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಧರಣಿ ನೇತೃತ್ವ ವಹಿಸಿದ್ದ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ. ಮಧುಕುಮಾರ್ ಮಾತನಾಡಿ, ಗಿರಿಜನರ ಅಭಿವೃದ್ದಿಗಾಗಿ ಬಂದಿರುವ 40 ಕೋಟಿ ಹಣವನ್ನು ಖರ್ಚು ಮಾಡದೆ ಜಿಲ್ಲಾಧಿಕಾರಿಗಳು ಹಾಗೆಯೇ ಇಟ್ಟಿದ್ದಾರೆ.
ಆದಿವಾಸಿಗಳಾದ ನಾವು ನೆಲ, ಜಲ, ಕಾಡಿನ ರಕ್ಷಣೆಯ ಬಗ್ಗೆ ಹೆಚ್ಚಿನ ಜವಾಬ್ಧಾರಿ ವಹಿಸುತ್ತಾ ಬಂದಿರುತ್ತೇವೆ.
ಆದಿವಾಸಿಗಳಿಗೆ ಮೀಸಲಿರಿಸಿರುವ ಕೆಲವು ಯೋಜನೆಗಳನ್ನು ಆದಿವಾಸಿಗಳಲ್ಲದವರು ಕಬಳಿಸುತ್ತಿದ್ದಾರೆ ಈ ಬಗ್ಗೆ ಸರ್ಕಾರಗಳು ತಿಳಿದೂ ತಿಳಿಯದಂತಿದೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement