'ಹೊಟ್ಟೆ ಬಟ್ಟೆ ಕಟ್ಟಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ'
ಮೈಸೂರು: ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳಿಗೆ ಹೊಟ್ಟೆಬಟ್ಟೆ ಕಟ್ಟಾದರೂ ಶಿಕ್ಷಣ ಕೊಡಿಸಲು ಆದ್ಯತೆ ನೀಡುವಂತೆ ಶಾಸಕ ಎಂ.ಕೆ. ಸೋಮಶೇಖರ್ ಕರೆ ನೀಡಿದರು.
ಆಲನಹಳ್ಳಿ ಬಡಾವಣೆಯ ವಿವೇಕ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಲ್ಲಿ ಒಳೆಯ ಪ್ರತಿಭೆ ಇರುತ್ತದೆ. ಅವರನ್ನು ಕಷ್ಟ ಪಟ್ಟು ಓದಿಸುವಂತೆ ಹೇಳಿದರು. ಈ ಶಾಲೆಯ ಪ್ರಗತಿ ಕೇಳಿ ಸಂತಸವಾಗಿದೆ. ಈ ಶಾಲೆಯ ಕಾಂಪೌಂಡ್ ಹಾಗೂ ಕಟ್ಟಡ ಕಟ್ಟಲು ರು. 7 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ ಮಾತನಾಡಿ, ಖಾಸಗಿ ಶಾಲೆಯನ್ನು ಉತ್ತಮವಾಗಿ ನಡೆಸುವುದು ತುಂಬಾ ಕಷ್ಟ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿ, ಮಕ್ಕಳಿಗೆ ಯಾವುದೆ ಆಸ್ತಿ ಮಾಡು ಬದಲು, ಮಕ್ಕಳೇ ನಿಜವಾದ ಆಸ್ತಿ ಎಂದು ಭಾವಿಸಿ ಅವರ ಮುಂದಿನ ಭವಿಷ್ಯಕ್ಕಾಗಿ ಗಮನ ವಹಿಸುವಂತೆ ತಿಳಿಸಿದರು. ಕೋಡಿಹಳ್ಳಿ ನಂಜುಂಡೇಗೌಡ ಮಾತನಾಡಿ, ಈ ಶಾಲೆಯ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಪ್ರತಿ ವರ್ಷ 5 ಸಾವಿರ ರು. ನಮ್ಮ ಇಂಟರ್ ನ್ಯಾಷನಲ್ ಕನಕದಾಸ ಮಿಷನ್ ಸಂಸ್ಥೆಯಿಂದ ನೀಡುವುದಾಗಿ ಹೇಳಿದರು. ಜಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ತಮ್ಮ ಸಂಸ್ಥೆಯಿಂದ 50 ಸಾವಿರ ರು. ನೀಡುವುದಾಗಿ ಹೇಳಿದರು.
ಸಮಾಜ ಸೇವಕ ಎಂ.ಬಿ. ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ನಗರಪಾಲಿಕೆ ಸದಸ್ಯ ರಜನಿ ಅಣ್ಣಯ್ಯ, ಶಾಲಾ ಅಧ್ಯಕ್ಷೆ ಕೆ.ಎಚ್. ಸಂಜೀವಶೆಟ್ಟಿ, ಕೆ.ಎನ್. ಗೋವಿಂದಶೆಟ್ಟಿ, ಎಚ್.ವಿ. ರಂಗದಾಸಶೆಟ್ಟಿ, ರಮೇಶ್, ಕೆ.ಎಚ್. ಲಕ್ಷ್ಮಿನಾರಾಯಣಶೆಟ್ಟಿ, ಮಲ್ಲಶೆಚ್ಚಿ, ಕೇಶವಶೆಟ್ಟಿ, ದಾಸಪ್ಪ ಶೆಟ್ಟಿ ಇದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯದರ್ಶಿ ಕೆ.ಜೆ. ನಾರಾಯಣ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಲಕ್ಷ್ಮಣಾಚಾರ್ ವಂದಿಸಿದರು.