ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಶುರಾಂ ಬಂಧನಕ್ಕೆ ಖಂಡನೆ

Rashmi Kasaragodu
Updated On : 2 Jul 2014, 1:05 am

ಮೈಸೂರು: ಜಾತಿ ನಿಂದನೆ ಪ್ರಕರಣದಲ್ಲಿ ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶುರಾಂ ಬಂಧಿಸುವ ಮುನ್ನ ಪೊಲೀಸರು ದೂರಿನ ಸತ್ಯಾಸತ್ಯತೆ ಪರಿಶೀಲಸಬೇಕಿತ್ತು. ನಂತರ ಕಾನೂನು ಕ್ರಮದ ಬಗ್ಗೆ ಆಲೋಚಿಸಬೇಕಿತ್ತು. ಆದರೆ, ಪೊಲೀಸರ ಈ ನಡವಳಿಕೆ ದ್ವೇಷದ ಹಿನ್ನೆಲೆ ಇರುವುದು ಕಂಡುಬರುತ್ತದೆ. ಸಾಹಿತಿ ದೇವನೂರು ಮಹಾದೇವ ಅವರು ನೀಡಿರುವ ಸಲಹೆಯಂತೆ ಈ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆ ಆಗಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ. ಒಡನಾಡಿ ಸಂಸ್ಥೆ ಪರಶುರಾಂ ಮೇಲಿನ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಗಂಭೀರ ತನಿಖೆಗೆ ಒಳಪಡಿಸಬೇಕು ಎಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆಯ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ, ಮುಖಂಡ ದ್ಯಾವಪ್ಪನಾಯಕ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement