ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನಸ್ಸು ಸ್ವಚ್ಛವಾಗಿಟ್ಟುಕೊಳ್ಳಿ: ಸಿದ್ದೇಶ್ವರ ಶ್ರೀ

Rashmi Kasaragodu
Updated On : 2 Jul 2014, 1:04 am

ಎಚ್.ಡಿ. ಕೋಟೆ: ಭಕ್ತಿ ಭಂಡಾರಿ ಬಸವಣ್ಣನವರ ಮಾತಿನ ಶೈಲಿಯಿಂದ ಭಾರತವಷ್ಟೇ ಅಲ್ಲ ಜಗತ್ತೇ ಬೆಳಕಿನ ದೇಶವಾಗಲಿದೆ ಎಂದು ಬಿಜಾಪುರ ಜಿಲ್ಲೆಯ ಜ್ಞಾನಯೋಗಾಶ್ರವುದ ಸಿದ್ದೇಶ್ವರಸ್ವಾಮಿ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ನಡೆದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮನೆಯನ್ನು ಸ್ವಚ್ಛ ಮಾಡಿಟ್ಟುಕೊಂಡಿರುವಂತೆ ಮನಸ್ಸನ್ನು ಸ್ವಚ್ಛ ಮಾಡಿಕೊಂಡಿರಬೇಕು. ನಾಲಿಗೆಯಿಂದ ಒಳ್ಳೆಯ ಮಾತನ್ನು ಮಾತ್ರ ಆಡಬೇಕು. ಮನಸ್ಸಿನಲ್ಲಿ ಕೆಟ್ಟ ಚಿಂತನೆ ಇಟ್ಟುಕೊಳ್ಳಬಾರದು ಶ್ರೇಷ್ಠ ಅನುಭವಿ ಬಸವಣ್ಣನವರು ನುಡಿದಂತೆ ಮನಸ್ಸು ವಿಶಾಲಗೊಂಡಲ್ಲಿ ನಾವು ಕಂಡ ಎಲ್ಲರೂ ದೈವ ಸ್ವರೂಪಿಗಳಾಗುತ್ತಾರೆ. ದೂರದರ್ಶಿತ್ವ ಸ್ವಚ್ಛ ಹೃದಯದಿಂದ ದೇಶಕಟ್ಟುವುದು ಶರಣರ ಜೀವನದ ಒಂದು ಭಾಗ ಎಂದು ತಿಳಿಸಿದರು.
ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ತಾಲೂಕಿನಲ್ಲಿ ಯಾವುದೆ ಸಮುದಾಯದ ಜನತೆಗೆ ಅನ್ಯಾಯವಾದರೆ ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ತಾಲೂಕಿನಲ್ಲಿ ಜಾತಿ, ಜಾತಿ ನಡುವೆ ಸಂಘರ್ಷ ಮೂಡಬಾರದು. ಇದರಿಂದ ಗ್ರಾಮದಲ್ಲಿ ಅಶಾಂತಿ ಮೂಡುತ್ತದೆ. ಜನ ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ. ಹಾಗಾಗಿ ಜಾತಿ ನಿಂದನೆ ಪ್ರಕರಣಗಳು ಠಾಣೆ ಮಟ್ಟಿಲು ಹತ್ತಿದಾಗ, ದೂರಿನಲ್ಲಿ ಸತ್ಯಾಂಶ ಇದ್ದರೆ ಮಾತ್ರ ದೂರನ್ನು ಸ್ವೀಕೃತಿ ಮಾಡಿ. ಇಲ್ಲದಿದ್ದರೆ ಬೇಡಿ ಎಂಬ ಸೂಚನೆಯನ್ನು ಪೊಲಿಸರಿಗೆ ಕೊಟ್ಟಿದ್ದೇನೆ. ಸತ್ಯಾಂಶ ಇರದ ದೂರಿನನ್ವಯ ಪೊಲೀಸರು ಮೊಕದ್ದಮೆ ದಾಖಲಿಸಿದರೆ ಯಾವುದೋ ವೈಯಕ್ತಿಕ ದ್ವೇಷದ ಮೇಲೆ ಕೊಡುವ ದೂರು, ಅಮಾಯಕನ ಪ್ರತಿಷ್‌ಠೆಗೆ ಧಕ್ಕೆ ತರುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಎಂ. ಶಿವಣ್ಣ ಮಾತನಾಡಿ, ಮಹಾತ್ಮರ ಜಯಂತಿ ಕಾರ್ಯಕ್ರಮಗಳು ಕೇವಲ ಕೆಲವು ಜಾತಿಗಳಿಗೆ ಮೀಸಲಾಗುತ್ತಿರುವುದು ಸಮಾಜಕ್ಕೆ ಒಳ್ಳೆಯದಲ್ಲ. ಈ ಪದ್ಧತಿ ತೊಲಗಬೇಕು. ಮಹಾತ್ಮರ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದ ಜನತೆ ಭಾಗವಹಿಸಬೇಕು ಎಂದು ತಿಳಿಸಿದರು.
ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೇವನೂರು ಮಠದ ಮಹಾಂತಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಎಸ್.ಎನ್. ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದರು.
ಪಪಂ ಅಧ್ಯಕ್ಷ ಎನ್. ಉಮಾಶಂಕರ್, ಜಿಪಂ ಸದಸ್ಯರಾದ ಎಚ್.ಸಿ. ಮಂಜುನಾಥ್, ಭಾಗ್ಯಲಕ್ಷ್ಮಿ, ಮಾದಾಪುರ ಮಠದ ಮಲ್ಲಿಕಾರ್ಜುನಸ್ವಾಮಿ, ಬಿಡಗಲು ಮಠದ ಮಹದೇವಸ್ವಾಮಿ, ಹಂಚೀಪುರ ಮಠದ ಚೆನ್ನಬಸವಸ್ವಾಮಿ, ದಡದಹಳ್ಳಿ ಮಠದ ಷಡಕ್ಷರಸ್ವಾಮಿ ಮತ್ತು ಎಂ. ಮಾದರಾಜು, ಸಿ.ಎಸ್. ಕುಮಾರಸ್ವಾಮಿ, ಎ.ಎಸ್. ಮಹದೇವಸ್ವಾಮಿ, ಎಂ.ಎಸ್. ಗಿರೀಶ್ ಮೂರ್ತಿ, ಪಿ.ಎಸ್. ಸ್ವಾಮಿ, ವರ್ತಕರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ್, ಶಿವಪ್ಪಕೋಟೆ, ಗುರುಸ್ವಾಮಿ, ಪ್ರಸಾದ್, ಮೊತ್ತ ಬಸವರಾಜಪ್ಪ, ಕೆಂಡಗಣ್ಣಸ್ವಾಮಿ, ಮಹದೇವಸ್ವಾಮಿ, ಮಾದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement