ಶಾಲಾ ದಾಖಲು ಆಂದೋಲನ
ಎಚ್.ಡಿ. ಕೋಟೆ: ತಾಲೂಕಿನ ತುಂಬಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ಸೋಮವಾರ ನಡೆಯಿತು. ಶಾಲೆಯಿಂದ ಆರಂಭವಾದ ಜಾಥಾವು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಎಂಬ ಘೋಷಣೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಸಹ ಶಿಕ್ಷಕರಾದ ಚಿಕ್ಕನಾಯಕ, ಲತಾಮಣಿ, ಚಿಕ್ಕಹನುಮಿ, ನಾಜೀಮಾ ಇದ್ದರು.