ದೇವಿತಂದ್ರೆ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ
ಭೇರ್ಯ: ಸಮೀಪದ ದೇವಿತಂದ್ರೆ ಗ್ರಾಪಂ ಅಧ್ಯಕ್ಷರಾಗಿ ಸಾವಿತ್ರಮ್ಮ ರಾಮಚಂದ್ರ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 18 ಸದಸ್ಯ ಬಲದ ಗ್ರಾಪಂಗೆ ಈ ಹಿಂದೆ ಅಧ್ಯಕ್ಷರಾಗಿದ್ದ ರೇಣುಕಮ್ಮ ಅವರು ರಾಜಿನಾಮೆ ನೀಡಿದ್ದರು. ಚುನಾವಣಾಧಿಕಾರಿ ಜಲಾನಯನ ಇಲಾಖೆಯ ಕೆ.ಎಸ್. ಮಲ್ಲಪ್ಪ ಅವಿರೋಧ ಆಯ್ಕೆ ಪ್ರಕಟಿಸಿದರು.