ಪಪಂ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷ ರಾಮಕೃಷ್ಣ
ಟಿ. ನರಸೀಪುರ: ತಾಪಂ ಕಡೆಯ ಅವಧಿಗೆ ಅಧ್ಯಕ್ಷರಾಗಿ ಆಲಗೂಡು ಕ್ಷೇತ್ರದ ಸುಧಾ ನಾಗಣ್ಣ ಹಾಗೂ ಉಪಾಧ್ಯಕ್ಷರಾಗಿ ಕೊಡಗಹಳ್ಳಿ ಕ್ಷೇತ್ರದ ರಾಮಕೃಷ್ಣ ಆಯ್ಕೆಯಾದರು. ತಾಪಂ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಪ.ಪಂಗಡ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಲಕ್ಷ್ಮೀ, ಉಪಾಧ್ಯಕ್ಷ ಸ್ಥಾನಕ್ಕೆ ಗುರುಮೂರ್ತಿ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್ನಿಂದ ಸುಧಾ ನಾಗಣ್ಣ ಹಾಗೂ ರಾಮಕೃಷ್ಣ ಕ್ರಮವಾಗಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣೆ ನಡೆದು ಕಾಂಗ್ರೆಸ್ನ ಸುಧಾ ನಾಗಣ್ಣ ಮತ್ತು ರಾಮಕೃಷ್ಣ ತಲಾ 13 ಮತ ಪಡೆದು ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಪ್ರತಿಸ್ಪರ್ಧಿಗಳು 12 ಮತಗಳನ್ನು ಪಡೆದರು. 25 ಸದಸ್ಯರು ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಎಸಿ ಬಸವರಾಜು ಕಾರ್ಯನಿರ್ವಹಿಸಿದರು. ಕಾರ್ಯನಿರ್ವಹಣಾಧಿಕಾರಿ ತಿಮ್ಮೇಗೌಡ, ಸದಸ್ಯರಾದ ಅಂದಾನಿ, ನಟರಾಜು, ಗಾಯಿತ್ರಿ ಸ್ವಾಮಿಗೌಡ, ನಸ್ರೀನ್ ರೂಹಿ, ಬಸವರಾಜು, ಶಂಕರೇಗೌಡ, ಸಿ. ವೆಂಕಟೇಶ್, ಮಲ್ಲಾಜಮ್ಮ, ಪಿ. ಗಿರೀಶ್, ಸುಜಾತ ವೆಂಕಟೇಶ್, ಸುವರ್ಣಮ್ಮ ಇದ್ದರು.