ವಿದೇಶ ಪ್ರವಾಸ ಕೈಗೊಂಡವರಿಗೆ ಬೀಳ್ಕೊಡುಗೆ
ಕೆ.ಆರ್.ನಗರ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉದ್ಯಮಿಗಳಾದ ಎಂ.ಆರ್. ಹರೀಶ್, ಸುದೀಶ್ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೀಳ್ಕೊಡುಗೆ ನೀಡಲಾಯಿತು.
ಈ ವೇಳೆ ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಮಾತನಾಡಿ, ವಿದೇಶ ಪ್ರವಾಸ ಕೈಗೊಳ್ಳುವವರು ಅಲ್ಲಿನ ಜನಜೀವನ ಮತ್ತು ನಾಗರಿಕತೆ ಅಧ್ಯಯನ ಮಾಡುವುದರ ಜತೆಗೆ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕು ಎಂದರು. ಜಿಪಂ ಸದಸ್ಯೆ ಕಲ್ಪನಾ ಧನಂಜಯ, ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಮುಖಂಡರಾದ ಕೃಷ್ಣೇಗೌಡ ಮಾತನಾಡಿದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಮುಖಂಡರಾದ ಬೇಕರಿ ಉಮೇಶ್, ಎಚ್.ಡಿ.ರಾಘವೇಂದ್ರ, ಅನಿಲ್ಕುಮಾರ್, ಸಿ.ಜಿ.ಮಧುಸೂದನ್, ರಾಜಾ ಶ್ರೀಕಾಂತ್, ನಂಜುಂಡ, ಶಿವರಾಂ, ಪಾಲಾಕ್ಷ, ಭಾಸ್ಕರ್, ಮಹೇಶ್ ಇದ್ದರು.