ರೆಡ್ಕ್ರಾಸ್ ಸಂಸ್ಥೆ ವಿರುದ್ಧ ಪ್ರತಿಭಟನೆ
ಮೈಸೂರು: ಜಿಲ್ಲಾ ಪುನರ್ ವಸತಿ ಕೇಂದ್ರದ ನಿರ್ವಹಣೆ ಮಾಡುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಅವ್ಯವಹಾರದಲ್ಲಿ ತೊಡಗಿದ್ದು, ಈ ಸಂಸ್ಥೆಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ತಿಲಕನಗರದಲ್ಲಿರುವ ಪುನರ್ ವಸತಿ ಕೇಂದ್ರದ ಎದುರು ನಾನಾ ಸಂಘಟನೆಗಳ ಸದಸ್ಯರು ಗುರುವಾರ ಪ್ರತಿಭಟಿಸಿದರು.
ರಾಜ್ಯ ಅಂಧರ ಒಕ್ಕೂಟ, ವಿಕಲ ವಿಕಾಸ, ಎಂಆರ್ಡಬ್ಲ್ಯೂ ಮತ್ತು ವಿಆರ್ಡಬ್ಲ್ಯೂ, ರಾಜ್ಯ ಅಂಗವಿಕಲರ ವೇದಿಕೆ, ವಿಕಲಚೇತನರ ಒಕ್ಕೂಟಗಳ ಕಾರ್ಯಕರ್ತರು ರೆಡ್ಕ್ರಾಸ್ ಸಂಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಕಲ ವಿಕಾಸದ ಮ್ಯಾನೆಜಿಂಗ್ ಟ್ರಸ್ಟಿ ವೈದ್ಯನಾಥ್, ಕರ್ನಾಟಕ ಅಂಧರ ಸಂಘದ ಕಾರ್ಯದರ್ಶಿ ಮಹೇಶ್, ಎಂಆರ್ಡಬ್ಲ್ಯೂ ಕಾರ್ಯದರ್ಶಿ ಸ್ವಾಮಿ, ವಿಕಲ ವಿಕಾಸ ಖಜಾಂಚಿ ರವಿಕುಮಾರ್, ಶಿವಲಿಂಗಯ್ಯ, ಮುಖಂಡರಾದ ರಾಜಪ್ಪ, ಬಾಬುರಾಜ್ ಇದ್ದರು.