ಆಟೋ ಸಂಘಕ್ಕೆ ಆಯ್ಕೆ
ಮೈಸೂರು: ಮೈಸೂರು ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಂ. ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಸಿ.ರಾಮಸ್ವಾಮಿ ಆಯ್ಕೆಯಾಗಿದ್ದಾರೆ.
ಮಂಜುನಾಥ್ಗೆ ಡಾಕ್ಟರೇಟ್
ಮೈಸೂರು: ಡಾ.ಎಂ.ಅನ್ನಪೂರ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಬಿ.ಆರ್.ಮಂಜುನಾಥ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಮಾನವಶಾಸ್ತ್ರ ವಿಷಯಕ್ಕೆ ಪಿಎಚ್ಡಿ ಪದವಿ ನೀಡಿದೆ.
ಗಿಡ ನೆಟ್ಟು ಹುತಾತ್ಮ ದಿನಾಚರಣೆ
ಮೈಸೂರು: ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರ ಹುತಾತ್ಮ ದಿನದ ಅಂಗವಾಗಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಎನ್.ಆರ್. ಮೊಹಲ್ಲಾದ ಶಿವಾಜಿ ಪಾರ್ಕ್ನಲ್ಲಿ ಗಿಡ ನೆಟ್ಟರು. ಬಿಜೆಪಿ ನಗರಾಧ್ಯಕ್ಷ ಇ.ಮಾರುತಿರಾವ್ ಪವಾರ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಗರಪಾಲಿಕೆ ಸದಸ್ಯರಾದ ಆರ್. ಪುಟ್ಟಲಿಂಗು, ರತ್ನಲಕ್ಷ್ಮಣ ಸಸಿ ನೆಟ್ಟರು. ಬಿಜೆಪಿ ಯುವ ಮೋರ್ಚಾ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಬಿ. ಸಂಪತ್ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪರಿಕ್ಷೀತ್ ರಾಜೇ ಅರಸ್, ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಎಲ್.ಜಗದೀಶ್, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಕೆ.ದೇವರಾಜ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಸತೀಶ್, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಆನಂದ, ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಎಂಡಿಎ ಮಾಜಿ ಸದಸ್ಯ ಟಿ.ರಮೇಶ್, ಉಪಾಧ್ಯಕ್ಷ ಶ್ರೀನಿವಾಸ್, ನಾರಾಯಣ್ ಭಾಗವಹಿಸಿದ್ದರು.
ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆ
ಮೈಸೂರು: ನಗರದ ದಕ್ಷಿಣ ವಲಯ ರೇಲ್ವೆ ಕಾರ್ಯಾಗಾರ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 2014-15ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಈ ಕೆಳಕಂಡ ವಿದ್ಯಾರ್ಥಿಗಳು ಮಂತ್ರಿಮಂಡಳದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೆ. ಮನೋಜ್ (10ನೇ ತರಗತಿ)- ಮುಖ್ಯಮಂತ್ರಿ, ಸಹನಾ ಕ್ರಿಸ್ಟಲ್ (10ನೇ)- ಉಪಮುಖ್ಯಮಂತ್ರಿ, ಕೆ. ರಮೇಶ (9ನೇ), ಮುಂಜೀರಾ (10ನೇ)- ಕ್ರೀಡಾಮಂತ್ರಿಗಳು, ಸೌಂದರ್ಯ (9ನೇ)- ಸಾಂಸ್ಕೃತಿಕ ಮಂತ್ರಿ, ಭೀಮರಾಜು (9ನೇ)- ಶಿಕ್ಷಣ ಮಂತ್ರಿ, ಅಭಿನೇಶ (10ನೇ), ತಮನ್ನಾ (8ನೇ)- ಪರಿಸರ ಮತ್ತು ನೈರ್ಮಲ್ಯ ಮಂತ್ರಿಗಳು, ಸೈಯದ್ದ ಮಕ್ಸೂದ್, ಪ್ರಮೀಳಾ (9ನೇ)- ಆರೋಗ್ಯ ಮಂತ್ರಿಗಳು, ಎಲ್. ಅನುಷಾ (10ನೇ)- ಗೃಹಮಂತ್ರಿ, ಟಿ.ಸಿ. ಮೇಘನಾ (10ನೇ)- ಕಾನೂನು ಮಂತ್ರಿ, ನಿತ್ಯಾ ಆಶಾ (9ನೇ)- ವಾರ್ತಾಮಂತ್ರಿ, ಕಾರ್ತಿಕ್ (10ನೇ), ಗಂಗಾಧರ (8ನೇ)- ಆಹಾರ ಮಂತ್ರಿ. ಮುಖ್ಯಶಿಕ್ಷಕಿ ಪದ್ಮಾಂಬ ಅವರು ಮುಖ್ಯ ಚುನಾವಣಾಧಿಕಾರಿಗಳಾಗಿದ್ದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಶಿಕ್ಷಕರಾದ ಕೆ.ಸಿ. ಸುಧಾಮಣಿ, ಎನ್. ನಾಗರಾಜು, ವಿ. ಲೀಲಾವತಿ, ವಿನುತಬಗರೆ, ನೂರ್ ಸಲ್ಮಾ ಬಾನು, ನಾಗರತ್ನ, ರಾಮಾನುಜಂ ಭಾಗವಹಿಸಿದ್ದರು. ಶಿಕ್ಷಕ ಎನ್. ನಾಗರಾಜು ಅವರು ಆಯ್ಕೆಯಾದ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.