ವಿಶ್ವನಾಥ್ ಹೇಳಿಕೆಗೆ ಖಂಡನೆ
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಣ ಎಂಬ ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಜಿ. ಮಾದಯ್ಯ ಖಂಡಿಸಿದ್ದಾರೆ. ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಸೋಲಿಗೆ ಅಡುಗೆ ಅನಿಲ ಗೊಂದಲ ಮತ್ತು ಆಧಾರ್ ಕಾರ್ಡ್ ಗೊಂದಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಪ್ರಗತಿ ಸಹಿಸಲಾಗದೆ ಪ್ರತಿಪಕ್ಷಗಳು ಜನರ ದಾರಿ ತಪ್ಪಿಸುತ್ತಿರುವಾಗ ಈ ರೀತಿಯ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಚುನಾವಣೆ ಸೋತ ಜನವಿರೋಧಿಗಳನ್ನು ಗುರುತಿಸುವ ಬದಲು ಪಕ್ಷದಲ್ಲಿ ಯಾವ ಅಧಿಕಾರವೂ ಇಲ್ಲದೆ ಕಾಂಗ್ರೆಸ್ ಬಲಪಡಿಸುವ ಮತ್ತು ವಿಶ್ವಾಸದಿಂದ ಶ್ರಮಿಸುವ ಹಿರಿಯ ಕಾರ್ಯಕರ್ತರನ್ನು ಗುರುತಿಸಿ ಮಣೆ ಹಾಕಬೇಕು. ಆಗ ಮಾತ್ರ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲವು ಖಚಿತ ಎಂದು ಅವರು ತಿಳಿಸಿದ್ದಾರೆ.