ಅಪರಿಚಿತ ಯುವತಿ ಸಾವು
ಮೈಸೂರು: ಶಾಂತಿನಗರದ ಬಳಿ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ಯುವತಿ ಮೃತಪಟ್ಟಿದ್ದಾರೆ. ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಈ ಯುವತಿ, ಭಿಕ್ಷಾಟನೆ ಮಾಡಿಕೊಂಡಿದ್ದಳು. ಚಹರೆ- 19 ವರ್ಷ, 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಕೃಶವಾದ ಶರೀರ, ಕಪ್ಪು ತಲೆಕೂದಲು, ಬಲ ಹಣೆಯ ಮೇಲೆ ಹಳೆ ಗಾಯದ ಗುರುತಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418309, 509 ಸಂಪರ್ಕಿಸಲು ಉದಯಗಿರಿ ಠಾಣೆ ಪೊಲೀಸರು ಕೋರಿದ್ದಾರೆ.
ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಇಂದು
ಮೈಸೂರು: ನಗರದ ಅಶೋಕಪುರಂ ಪೊಲೀಸ್ ಠಾಣೆಯ ಅಭಯ ಯೋಜನೆಯಡಿ ಗುರುತಿಸಿಕೊಂಡಿರುವ ಹಿರಿಯ ನಾಗರಿಕರಿಗೆ ಜು.6ರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಕಾವೇರಿ ಕಾಲೇಜಿನಲ್ಲಿ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಅಶೋಕಪುರಂ ಠಾಣಾ ನಾಗರಿಕ ಸಲಹಾ ಸಮಿತಿ ವತಿಯಿಂದ ಆಯೋಜಿಸಿರುವ ಈ ಶಿಬಿರವನ್ನು ಆಶಾಕಿರಣ್ ಟ್ರಸ್ಟ್ನ ವೈದ್ಯ ಡಾ. ಗುರುರಾಜ್ ಮತ್ತು ತಂಡವು ನಡೆಸಿಕೊಡಲಿದ್ದಾರೆ. ಹಿರಿಯ ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಕೋರಿದ್ದಾರೆ.