ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಂಜನಗೂಡು ತಾಪಂ ಅಧ್ಯಕ್ಷ ಬಿಜೆಪಿ ಬಂಡಾಯ ಅಭ್ಯರ್ಥಿ

Rashmi Kasaragodu
Updated On : 6 Jul 2014, 1:03 am

ನಂಜನಗೂಡು: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ತಾಪಂ ಚುನಾವಣೆ ನಡೆದು ಬಿಜೆಪಿಯ ಒಡಕಿನ ಲಾಭವನ್ನು ಕಾಂಗ್ರೆಸ್ ಬಳಸಿಕೊಂಡಿತು. ತಾಪಂ ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಸುವಿನಹಳ್ಳಿ ಕ್ಷೇತ್ರದ ರತ್ನಮ್ಮ ಕೆಂಪಲಿಂಗಪ್ಪ ಹಾಗೂ ಇಮ್ಮಾವು ಕ್ಷೇತ್ರದ ರಾಜಮ್ಮ ಕೆಂಪಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಪಂ ಕಚೇರಿಯಲ್ಲಿ 3ನೇ ಅವಧಿಯ 20 ತಿಂಗಳ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಕೆಂಪಲಿಂಗಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಕೆಂಪಣ್ಣ ಸ್ಪರ್ಧಿಸಿದ್ದರು. ಅವರಿಗೆ 19 ಮತಗಳು ಬಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಎಚ್.ಕೆ. ಸವಿತಾ ರಂಗನಾಥ್, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಸೋಮಣ್ಣ ಅವರಿಗೆ 13 ಮತಗಳನ್ನು ಪಡೆದು ಸೋಲುಂಡರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಾದ ಬಸವರಾಜು ಅಧಿಕೃತವಾಗಿ ಘೋಷಿಸಿದರು.
20 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾಗಿದ್ದು, 32 ಸದಸ್ಯರಲ್ಲಿ 19 ಬಿಜೆಪಿ 10 ಕಾಂಗ್ರೆಸ್, ಜೆಡಿಎಸ್ 2, 1 ಸ್ವತಂತ್ರ ಸದಸ್ಯರಿದ್ದರು. ಕೇವಲ 10 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಬಂಡಾಯ ಬಿಜೆಪಿಯ 7 ಸದಸ್ಯರು ಹಾಗೂ ಜೆಡಿಎಸ್ ಮತ್ತು ಸ್ವತಂತ್ರ ಪಕ್ಷದ ಒಬ್ಬ ಅಭ್ಯರ್ಥಿ ಆಪರೇಷನ್ ಹಸ್ತದ ಮೂಲಕ ಸೆಳೆದು ಅಧಿಕಾರ ಹಂಚಿಕೊಂಡ ಪರಿಣಾಮ ಬಹುಮತವಿದ್ದರೂ ಬಿಜೆಪಿ ಪಕ್ಷ ಕೆಲವು ಜಿಲ್ಲಾ ಬಿಜೆಪಿ ಮುಖಂಡರ ವರ್ತನೆಯಿಂದ ಕತ್ತು ಹಿಸುಕಿಕೊಳ್ಳುವ ಸ್ಥಿತಿ ಪಕ್ಷಕ್ಕೆ ಒದಗಿಬಂದಿದೆ.
ಚುನಾವಣಾಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಬಸವರಾಜು, ತಹಸೀಲ್ದಾರ್ ವಿ. ರಾಜೇಂದ್ರ, ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೃಷ್ಣಂರಾಜು ಸದಸ್ಯರು ಭಾಗವಹಿಸಿದ್ದರು.


ಶಿಸ್ತು ಕ್ರಮಕ್ಕೆ ಆಗ್ರಹ
ತಾಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ವಿಫಲರಾದ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಎಸ್. ಮಹದೇವಯ್ಯ ಹಾಗೂ ಜಿಪಂ ಸದಸ್ಯ ಕೆಂಪಣ್ಣ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ  ಮೈಸೂರು ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್.ಕೆ. ರಂಗನಾಥ್ ಒತ್ತಾಯಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement