ಪಪಂ ಮಾಜಿ ಅಧ್ಯಕ್ಷ ರಾಜಶೇಖರ ನಿಧನ
ಟಿ. ನರಸೀಪುರ : ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಸ್. ರಾಜಶೇಖರ(58) ಪಟ್ಟಣದ ಹಳೇ ಕುರುಬಗೇರಿಯಲ್ಲಿ ಶನಿವಾರ ನಿಧನರಾದರು.
ಕಳೆದ ಎರಡು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲಿ, ಹಾಸಿಗೆ ಹಿಡಿದಿದ್ದ ರಾಜಶೇಖರ್(ಮೂಗಪ್ಪ) ಎರಡು ಭಾರಿ ಪಪಂ ಚುನಾಯಿತ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ರಾಜಕಾರಣದಲ್ಲಿ ಸಜ್ಜನಿಕೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಮೊನ್ನೆಯಷ್ಟೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರಾದರೂ ಶನಿವಾರ ಬೆಳಗ್ಗೆ ನಿವಾಸದಲ್ಲಿ ಮೃತಪಟ್ಟರು.
ಹಳೇ ಸಂತೇಮಾಳ ಮೈದಾನದಲ್ಲಿ ರುಧ್ರಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ಧಾರ್ಮಿಕ ವಿಧಾನದಂತೆ ಸಂಜೆ ನೇರವೇರಿತು. ರಾಜಶೇಖರ್ ನಿಧನಕ್ಕೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಪಪಂ ಅಧ್ಯಕ್ಷೆ ರತ್ನಮ್ಮ ಲಿಂಗಣ್ಣ, ಮಾಜಿ ಅಧ್ಯಕ್ಷರಾದ ಬಸವಣ್ಣ, ಎನ್.ಎಸ್. ಬಸವರಾಜು ಸೇರಿದಂತೆ ಪಪಂ ಸದಸ್ಯರೆಲ್ಲರೂ ಸಂತಾಪ ಸೂಚಿಸಿದ್ದಾರೆ.