ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು ಫೆದರ್ಲೈಟ್ ಔಟ್ಲೆಟ್ ಆರಂಭ

Rashmi Kasaragodu
Updated On : 6 Jul 2014, 12:51 pm

ಮೈಸೂರು: ಫೆದರ್ಲೈಟ್ ಗೃಹೋಪಯೋಗಿ ಪೀಠೋಪಕರಣಗಳ ಔಟ್ಲೆಟ್ಅನ್ನು ನಗರದ ಕೃಷ್ಣಮೂರ್ತಿಪುರಂನ ನ್ಯೂ ಕಾಂತರಾಜ್ ಅರಸ್ ರಸ್ತೆಯಲ್ಲಿ ಆರಂಭಿಸಿದ್ದು, ಔಟ್ಲೆಟ್ಅನ್ನು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಶನಿವಾರ ಉದ್ಘಾಟಿಸದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪನಿಯ ಕಿಂಗ್ಶೂ ಮತ್ತು ಜಯಶಂಕರ್ ಮಾತನಾಡಿ, ಫೆದರ್ಲೈಟ್ ಕಂಪನಿಯು 49 ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಪೀಠೋಪಕರಣಗಳ ಉತ್ಪನ್ನಗಳನ್ನು ಪೂರೈಸುತ್ತಿದೆ. ನಾನಾ ರೀತಿಯ ಆಸನ ವ್ಯವಸ್ಥೆಗಳನ್ನು ಒದಗಿಸುವ ಈ ಕಂಪನಿಯಲ್ಲಿ ಎಲ್ಲ ಶ್ರೇಣಿಗಳ ಕುರ್ಚಿಗಳು, ಸೋಫಾ ಸೆಟ್, ಸಾರ್ವಜನಿಕ ಆಸನ ವ್ಯವಸ್ಥೆ, ಸಭಾಂಗಣದ ಆಸನ ವ್ಯವಸ್ಥೆ, ಕಚೇರಿ ಮತ್ತು ವಿದ್ಯಾಸಂಸ್ಥೆಗಳಿಗೆ ಆಸನ ವ್ಯವಸ್ಥೆ ಪೂರೈಸುತ್ತಿದೆ ಎಂದು ಹೇಳಿದರು. ಕಂಪನಿ ವತಿಯಿಂದ ಪ್ರತಿ ತಿಂಗಳು 30 ಸಾವಿರಕ್ಕೂ ಹೆಚ್ಚಿನ ಕುರ್ಚಿಗಳನ್ನು ತಯಾರಿಸಲಾಗುತ್ತಿದೆ.ಹೆಚ್ಚಿನ ಮಾಹಿತಿಗೆ ದೂ. 0821- 4257220 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement