ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹುಣಸೂರು ಆಸ್ಪತ್ರೆಗೆ ಸಚಿವ ಖಾದರ್ ಭೇಟಿ

Rashmi Kasaragodu
Updated On : 6 Jul 2014, 1:04 am

ಹುಣಸೂರು : ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ದಿಢೀರ್ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ದಂಗಾದರು..
ಆಸ್ಪತ್ರೆಗೆ ಶನಿವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಬೇಸರಗೊಂಡರು. ಆಸ್ಪತ್ರೆಯ ಎಲ್ಲಾ ವಾರ್ಡ್ಗಳನ್ನು ಪರಿಶೀಲಿಸಿದ ಸಚಿವರು ಶೌಚಾಲಯಗಳು ಗಬ್ಬುನಾತ ಬೀರುತ್ತಿದ್ದುದು, ಬಾಣಂತಿಯೊಬ್ಬರಿಗೆ ಮಡಿಲು ಕಿಟ್ ನೀಡಿದಿರುವುದು, ಆಸ್ಪತ್ರೆ ಸುಣ್ಣ ಬಣ್ಣ ಕಾಣದೇ ಬಳಲುತ್ತಿರುವುದನ್ನು ಕಂಡು ದಿಗ್ಬ್ರಮೆಗೊಂಡರು.
ನಂತರ ನಡೆದ ಸಭೆಯಲ್ಲಿ ಸುರಕ್ಷಾ ಸಮಿತಿ ಸದಸ್ಯರು, ಆಡಳಿತಾಧಿಕಾರಿಗಳ ಮೇಲೆ ದೂರುಗಳ ಸುರಿಮಳೆಗೈದರು. ಕಳೆದ ಎರಡು ವರ್ಷಗಳಿಂದ ಸುರಕ್ಷಾ ಸಮಿತಿ ಸಭೆಯನ್ನೇ ಕರೆದಿಲ್ಲ. ಆಡಳಿತಾಧಿಕಾರಿ ಸರ್ವಾಧಿಕಾರಿ ಧೋರಣೆ ತಾಳುವ ಮೂಲಕ ನಮ್ಮನ್ನೆಲ್ಲಾ ಕತ್ತಲೆಯಲ್ಲಿಟ್ಟಿದ್ದಾರೆ. ಡಿ ಗ್ರೂಪ್ ನೌಕರರ ಕೊರತೆಯ ಕುರಿತು ನಮಗೆ ತಿಳಿಸಿಲ್ಲ. ಆಸ್ಪತ್ರೆಯಲ್ಲಿ ಶುಚಿತ್ವ ತಾಂಡವ ವಾಡುತ್ತಿದೆಯೆಂದು ತಿಳಿಸಿದರು.
ಸದಸ್ಯರ ಆರೋಪ ಆಲಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲವೇ ಎಂದು ಗದರಿದಾಗ ಇವೆಲ್ಲ ಸುಳ್ಳು ಆರೋಪಗಳು ಸಾರ್. ಎಂದು ಆಡಳಿತಾಧಿಕಾರಿ ಉತ್ತರ ನೀಡಿದರು. ಆಡಳಿತಾಧಿಕಾರಿ ಅತ್ಯಂತ ಬುದ್ದಿವಂತಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಕಾನೂನುಕಟ್ಟಳೆಗಳನ್ನು ಮೀರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಸಾರ್ವಜನಿಕ ಆಸ್ಪತ್ರೆ ಅವರಪ್ಪನ ಆಸ್ತಿಯಾಗಿದೆಯೆಂದು ಶಾಸಕರು ತರಾಟೆಗೆ ತೆಗೆದುಕೊಂಡರು.
ಜಿಪಂ ಸದಸ್ಯೆ ಡಾ. ಪುಷ್ಪಾ ಅಮರನಾಥ್, ಸುರಕ್ಷಾ ಸಮಿತಿ ಸದಸ್ಯರಾದ ನವೀನ್ ರೈ, ಸಂಪತ್ಕುಮಾರ್,  ನಿಲುವಾಗಿಲು ಪ್ರಭಾಕರ್, ಅಜ್ಗರ್ ಪಾಷ, ಶ್ರೀನಿವಾಸ್, ಧರ್ಮಾಪುರ ರಮೇಶ್, ಮುಖಂಡರಾದ ಚಿಕ್ಕಸ್ವಾಮಿ, ಗೋವಿಂದರಾಜು, ಸುಧಾಮಣಿ ಇದ್ದರು.



ವಿಶೇಷ ತನಿಖಾ ದಳದಿಂದ ತನಿಖೆ
ಆಡಳಿತಾಧಿಕಾರಿಗೆ ತೀಕ್ಷ್ಣವಾಗಿ ಎಚ್ಚರಿಕೆ ನೀಡಿದ ಸಚಿವರು, ವಿಶೇಷ ತನಿಖಾ ದಳ ರಚಿಸಿ ಕಳೆದೊಂದು ವರ್ಷದಿಂದ ನಡೆದಿರುವ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಟಿ. ಪುಟ್ಟಸ್ವಾಮಿ ಅವರಿಗೆ ಆದೇಶಿಸಿದರು. ಜತೆಗೆ ಆಸ್ಪತ್ರೆಯ ಸುರಕ್ಷಾ ಸಮಿತಿ ಸದಸ್ಯರನ್ನುದ್ದೇಶಿಸಿ ಆಡಳಿತಾಧಿಕಾರಿ ಬದಲಾವಣೆಗಾಗಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಚಿವರು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement