ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ
ಕಿತ್ತೂರು: ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಮಾಲೀಕರು ಮತ್ತು ಜಾನುವಾರುಗಳಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಸಮೀಪದ ರಾಮನಾಥತುಂಗ ಗ್ರಾಮದ ಅಮ್ಮನಗುಡಿ ಕೊಪ್ಪಲಿನಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಮಹದೇವ ಬಿನ್ ಗಿಡ್ಡೇಗೌಡ ಎಂಬುವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದೆ. ಶನಿವಾರ ರಾತ್ರಿ ಮನೆ ಹಿಂಭಾಗ ನೀರೊಲೆಗೆ ಬೆಂಕಿ ಹಾಕಿದ್ದರಿಂದ ಅದು ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ತಕ್ಷಣ ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಆಗಮಿಸುವಷ್ಟರಲ್ಲಿ ಗ್ರಾಮಸ್ಥರು ಬೆಂಕಿ ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ