ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುರಸಭೆಗಾಗಿ ಹೋರಾಟ ನಡೆಸಲು ತೀರ್ಮಾನ

Rashmi Kasaragodu
Updated On : 7 Jul 2014, 1:48 am

ಟಿ. ನರಸೀಪುರ: ಹೋರಾಟದ ಮೂಲಕವೇ ಪುರಸಭೆಯನ್ನು ನರಸೀಪುರಕ್ಕೆ ಪಡೆದುಕೊಳ್ಳಬೇಕೆಂದು ಭಾನುವಾರ ನಡೆದ ಪುರಸಭೆ ಹೋರಾಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ಮಹದೇವಪ್ಪ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಪುರಸಭೆಯ ಹೋರಾಟ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ, ಅನಿರ್ದಿಷ್ಟಾವಧಿ ಧರಣಿ ಹಾಗೂ ಬಂದ್ನಂತಹ ಹೋರಾಟಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದು ಪುರಸಭೆ ಸ್ಥಾನ ಪಡೆದುಕೊಳ್ಳಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಭೈರಾಪುರ, ಆಲಗೂಡು ಗ್ರಾಪಂಗಳನ್ನು ಪಪಂನಲ್ಲಿ ವಿಲೀನಗೊಳಿಸಿ ಪುರಸಭೆ ಮಾಡಬೇಕೆಂಬ ಹಲವು ದಶಕಗಳ ಬೇಡಿಕೆ ಪ್ರಸ್ತಾಪವನ್ನು ಸರ್ಕಾರ ಕೈ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಜು.13ಕ್ಕೆ ಪಪಂ, ಆಲಗೂಡು ಹಾಗೂ ಭೈರಾಪುರ ಗ್ರಾಪಂನ ಚುನಾಯಿತ ಸದಸ್ಯರು ಸೇರಿದಂತೆ ಎಲ್ಲ ರಾಜಕೀಯ ಮುಖಂಡರ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಯಿತು.
ಟಾರ್ಗೆಟ್ ಮಾಡಿಲ್ಲ: ಪುರಸಭೆ ಹೋರಾಟ ಸಮಿತಿಯು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ಪುಟ್ಟು, ಕಲಾವಿದ ಕೆ.ಎಸ್.ಶ್ರೀಹರಿ, ಕೆ.ಎಂ.ಶಾಂತಕುಮಾರ್, ಕೆ.ಆರ್. ಷಣ್ಮುಖಸ್ವಾಮಿ, ಪಿ.ಪುಟ್ಟರಾಜು, ಅಧ್ಯಕ್ಷ ಎಚ್.ಆರೀಫ್, ಕೆ.ಎನ್. ಪ್ರಭುಸ್ವಾಮಿ, ಡಿ. ರಾಮಕೃಷ್ಣ, ಬಸವರಾಜು, ನಾಗರಾಜು, ವೆಂಕಟೇಶ್, ಬಿ. ಸೋಮಶಂಕರ್, ನಾಗೇಂದ್ರ, ಮುದ್ದಣ್ಣ, ಎಸ್. ದಿಲೀಪ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement