ಬಾಬು ಜಗಜೀವನ್ರಾಂ ಪುಣ್ಯತಿಥಿ ಆಚರಣೆ
ಮೈಸೂರು: ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ರಾಂ ಅವರ 28ನೇ ಪುಣ್ಯತಿಥಿ ಅಂಗವಾಗಿ ಭಾನುವಾರ ಬಾಬೂಜಿ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ನಗರದ ರೈಲು ನಿಲ್ದಾಣ ಬಳಿಯ ಡಾ.ಬಾಬು ಜಗಜೀವನ್ರಾಂ ವೃತ್ತದಲ್ಲಿರುವ ಬಾಬೂಜಿ ಪ್ರತಿಮೆಗೆ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾಲಾರ್ಪಣೆ ಮಾಡಿದರು. ಈ ವೇಳೆ ಮೈಸೂರು ಪೊಲೀಸ್ ವಾದ್ಯ ವೃಂದ ಸಂಗೀತ ನುಡಿಸಿದರು. ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಆರ್.ಧರ್ಮಸೇನ, ಮೇಯರ್ ಎನ್.ಎಂ.ರಾಜೇಶ್ವರಿ, ಉಪ ಮೇಯರ್ ವಿ.ಶೈಲೇಂದ್ರ, ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಮಾಜಿ ಶಾಸಕ ಸಿ.ರಮೇಶ್, ಪಾಲಿಕೆ ಸದಸ್ಯರಾದ ಶಿವಕುಮಾರ್, ಆರ್.ರವೀಂದ್ರಕುಮಾರ್, ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಜಿಪಂ ಸಿಇಒ ಪಿ.ಎ. ಗೋಪಾಲ್, ಎಸ್ಪಿ ಅಭಿನವ್ ಅಶೋಕ್ ಖರೆ, ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ, ಡಿಸಿಪಿಗಳಾದ ಎ.ಎನ್.ರಾಜಣ್ಣ, ಎಂ.ಎಂ. ಮಹದೇವಯ್ಯ, ಎಸಿಪಿ ಪ್ರಭಾಕರ ಬಿ. ಬಾರ್ಕಿ ಇದ್ದರು.