ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಚ್ಚುವ ಭೀತಿಯಲ್ಲಿ ಸರ್ಕಾರಿ ಶಾಲೆಗಳು

Rashmi Kasaragodu
Updated On : 7 Jul 2014, 1:48 am

ಎಚ್.ಡಿ. ಕೋಟೆ: ಹಲವು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿ ಎದುರಿಸುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ವಿಶ್ವಭಾರತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಪ್ರಥಮ ದರ್ಜೆ ಕಾಲೇಜಿನ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಹಳ್ಳಿಗಳಲ್ಲಿ ಸರ್ಕಾರದಿಂದ ಮಾನ್ಯತೆ ಪಡೆಯದ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಇಂತಹ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಹಂಬಲದಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರುಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಅವುಗಳನ್ನು ಮುಚ್ಚುವ ಸ್ಥಿತಿ ಇಂದು ಬಂದೊದಗಿದೆ ಎಂದರು. ಶಾಸಕ ಚಿಕ್ಕಮಾದು, ತಾಲೂಕಿನಲ್ಲಿ ವಿಶ್ವಭಾರತಿ ಎಜುಕೇಷನ್ ಟ್ರಸ್ಟ್ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರಥಮ ದರ್ಜೆ ಕಾಲೇಜು ಸಹ ತಾಲೂಕಿನಲ್ಲಿ ಮಾದರಿಯಾಗಿದೆ. ಅಲ್ಲದೇ ಈ ಶಾಲೆಗೆ ತಮ್ಮ ನಿಧಿಯಿಂದ 5 ಲಕ್ಷ ನೀಡುವುದಾಗಿ ತಿಳಿಸಿದರು. ಟ್ರಸ್ಟ್ನ ಎಂ. ರಾಜೇಗೌಡ, ಎಚ್.ಎಂ. ಮಲ್ಲಿಕಾರ್ಜುನ್, ಆಡಳಿತಾಧಿಕಾರಿ ರಾಮಕೃಷ್ಣೇಗೌಡ, ಪಪಂ ಅಧ್ಯಕ್ಷ ಉಮಾಶಂಕರ್, ಪ್ರಾಂಶುಪಾಲ ಶಿವನಂಜೇಗೌಡ, ಡಿ.ಆರ್. ಮಹೇಶ್, ಕಸ್ತೂರಿ ಸತೀಶ್, ಪುಟ್ಟೇಗೌಡ, ಚಾ. ನಂಜುಂಡಮೂರ್ತಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement