ರಸ್ತೆ ಕಾಮಗಾರಿಗೆ ಸರ್ಕಾರ ಒಪ್ಪಿಗೆ: ಸೇಠ್
ಮೈಸೂರು: ನಗರದ ಬನ್ನಿಮಂಟಪ ಎ ಕೈಗಾರಿಕಾ ಬಡಾವಣೆ ವ್ಯಾಪ್ತಿಯಲ್ಲಿ 16.55 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬನ್ನಿಮಂಟಪ ಎ ಕೈಗಾರಿಕಾ ಬಡಾವಣೆ ಬಳಿ ರೇಲ್ವೆ ಸರಕು ಸಂಗ್ರಹಾಗಾರ ಇದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಸರಕು ಸಾಗಣೆ ವಾಹನ ತಿರುಗಾಡುತ್ತಿವೆ. ಎಂಡಿಎ ವತಿಯಿಂದ 2.8 ಲಕ್ಷ ವೆಚ್ಚದಲ್ಲಿ ಜೋಡಿ ತೆಂಗಿನಮರ ರಸ್ತೆ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಬನ್ನಿಮಂಟಪ ಎ ಕೈಗಾರಿಕಾ ಬಡಾವಣೆಯ ರೇಲ್ವೆ ಕೆಳ ಸೇತುವೆಯಿಂದ ಹೊರ ವರ್ತುಲ ರಸ್ತೆವರೆಗೆ ಕಾಮಗಾರಿ ಹಾಗೂ ಮೈಸೂರು- ಬೆಂಗಳೂರು ರೇಲ್ವೆ ಮಾರ್ಗದಲ್ಲಿ ಸಮಾನಾಂತರವಾಗಿ ರೇಲ್ವೆ ಕೆಳ ಸೇತುವೆವರೆಗೆ ರಸ್ತೆ ನಿರ್ಮಿಸುವ ಕಾಮಗಾರಿ ಕೈಗೊಳ್ಳಲು ಎಂಡಿಎ ಮುಂದಾಗಿದೆ. ಇದಕ್ಕೆ ಸರ್ಕಾರ ಈಗಾಗಲೆ ಒಪ್ಪಿಗೆ ನೀಡಿದೆ. ಒಟ್ಟಾರೆ ರಾಜ್ಯ ಸರ್ಕಾರ 16.55 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.