ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕರೆಂಟ್ ಗಾಗಿ ಕೃಷಿಕರ ಒತ್ತಾಯ

Rashmi Kasaragodu
Updated On : 8 Jul 2014, 1:57 am

ಕ.ಪ್ರ. ವಾರ್ತೆ    ಎಚ್.ಡಿ. ಕೋಟೆ    ಜು.7
ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಉಲ್ಬಣಿಸಿದ್ದು, ಜಮೀನುಗಳಲ್ಲಿ ಅಳವಡಿಸಿರುವ ಪಂಪ್ಸೈಟ್ ಚಾಲನೆಯಾಗದೆ ಬೆಳೆಗಳು ದಿನದಿಂದ ದಿನಕ್ಕೆ ಒಣಗುತ್ತಿವೆ ಆರೋಪಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ರೈತ ಸಂಘದ ಅಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದ ಕಾರಣ ಬೆಳೆ ಒಣಗದಂತೆ ಪಂಪ್ಸೆಟ್ನ ಮೊರೆ ಹೋಗುತ್ತಿದ್ದಾರೆ. ಪಂಪ್ಸೆಟ್ನಿಂದ ನೀರು ಹಾಯಿಸಲು ಮುಂದಾದರೆ ವಿದ್ಯುತ್ ಇಲ್ಲದಂತಾಗಿದೆ. ಇದರಿಂದ ರೈತರ ಬೆಳೆಗಳು ಒಣಗುತ್ತಿವೆ. ತಕ್ಷಣ ಸಮರ್ಪಕ ವಿದ್ಯುತ್ ನೀಡಿ ರೈತರನ್ನು ಉಳಿಸಬೇಕಾಗಿದೆ ಎಂದರು. ತಾಲೂಕಿನ ತಾರಕ ಏತ ನೀರಾವರಿಯನ್ನು ತಕ್ಷಣವೇ ಕಬಿನಿ ಜಲಾಶಯದಿಂದ ಲಿಫ್ಟ್ ಮಾಡಿ ಕೋಟೆ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು. ತಾರಕ ಎಡದಂಡೆ, ಬಲದಂಡೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಎಡದಂಡೆ ನಾಲೆಯ ಕೆ.ಎಡತೊರೆಯಿಂದ ಮುಂದೆ 16 ಕಿಲೋ ಮೀಟರ್ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವುದಲ್ಲದೇ ಆ ಗ್ರಾಮಗಳ ಕೆರೆಗಳನ್ನು ದನಕರುಗಳಿಗೆ ಸಹಾಯವಾಗುವಂತೆ ತುಂಬಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಹುಲ್ಲಹಳ್ಳಿ ಪ್ರಕಾಶ್, ರವಿಕುಮಾರ್, ನಾಗರಾಜು, ಕೃಷ್ಣಮೂರ್ತಿ, ಮಿಲ್ ನಾಗರಾಜು, ದಾಸನಾಯಕ, ಗುರುಸ್ವಾಮಿ, ಮಹದೇವು, ದೇವರಾಜು, ಚಲುವರಾಜ್, ನೀಲಪ್ಪ, ಸ್ವಾಮಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement