ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಪಂ ಅಧ್ಯಕ್ಷರಿಗೆ ಕೊಲೆ ಬೆದರಿಕೆ

Rashmi Kasaragodu
Updated On : 8 Jul 2014, 1:58 am

ಭೇರ್ಯ: ಸಮೀಪದ ಮುಂಜನಹಳ್ಳಿ ಗ್ರಾಪಂ ಆವರಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಮೇಲೆ ಸದಸ್ಯರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸಾಲಿಗ್ರಾಮ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಸಿದ್ದಯ್ಯ ಮತ್ತು ಸಾಲಿಗ್ರಾಮ ಎಸ್ಐ ಮಹೇಶ್ ಗ್ರಾಪಂಗೆ ಭೇಟಿ ನೀಡಿ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.
ಘಟನೆ ನಡೆದ ದಿನ ಸಭೆಯಲ್ಲಿದ್ದ ಎಲ್ಲ ಸದಸ್ಯರನ್ನು ಕರೆಸಿ ಗ್ರಾಪಂ ಕಚೇರಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿದ ಪೊಲೀಸರು ಎಲ್ಲ ಸದಸ್ಯರ ಮತ್ತು ಸಿಬ್ಬಂದಿ ವಿಚಾರಣೆ ಮುಗಿಸಿದರೂ ಸಹ ಗ್ರಾಪಂ ಪಿಡಿಒ ಮಾತ್ರ ಕಚೇರಿಗೆ ಬರಲಿಲ್ಲ. ನಂತರ ವೃತ್ತ ನಿರೀಕ್ಷಕ ಸಿದ್ದಯ್ಯ ಪಿಡಿಒ ಬಂದ ಕೂಡಲೇ ಠಾಣೆಗೆ ಬರುವಂತೆ ಇದ್ದ ಸಿಬ್ಬಂದಿಗೆ ಹೇಳಿ ಹೊರಟರು.
ಗ್ರಾಪಂ ಸದಸ್ಯರ ಸ್ಪಷ್ಟನೆ: ಮುಂಜನಹಳ್ಳಿ ಗ್ರಾಪಂ ಅಧ್ಯಕ್ಷೆ ಅನಿತಾ ಅಮರ್ ಮೇಲೆ ಗ್ರಾಪಂ ಸದಸ್ಯ ಅನೀಪ್ ಕುಮಾರ್ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಗ್ರಾಪಂ ಸದಸ್ಯರಾದ ರಾಮನಾಯಕ ಮತ್ತು ವೆಂಕಟೇಶ್ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಪಂನಲ್ಲಿ ಶುಕ್ರವಾರ ಸಾಮಾನ್ಯ ಸಭೆ ಇದ್ದು, ಸಭೆಯಲ್ಲಿ 10 ಜನ ಗ್ರಾಪಂ ಸದಸ್ಯರು, ಪಿಡಿಒ ಹಾಜರಿದ್ದರು. ಸಭೆ ಪ್ರಾರಂಭವಾದ ನಂತರ ಗುಳಿವಿನ ಅತ್ತಿಗುಪ್ಪೆ ಗ್ರಾಮಕ್ಕೆ ವಿದ್ಯುತ್ ದೀಪಗಳನ್ನು ಹಾಕಿಸಲಾಗಿದ್ದು ವಿದ್ಯುತ್ ಸಾಮಗ್ರಿಗಳನ್ನು ಖರೀದಿಸಿದ್ದ ಬಗ್ಗೆ ಅಧ್ಯಕ್ಷೆ ಅನಿತಾ ಅಮರ್ ಮತ್ತು ಸದಸ್ಯ ಅನೀಪ್ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದ್ದು ನಂತರ ನಡಾವಳಿ ಪುಸ್ತಕಗಳನ್ನು ಎಸೆದಾಡಿದರು. ಅಧ್ಯಕ್ಷೆ ಅನಿತಾ ಅಮರ್ ನಡಾವಳಿ ಪುಸ್ತಕವನ್ನು ಸಭೆಯಿಂದ ಸದಸ್ಯರ ಮೇಲೆ ಬಿಸಾಡಿ ಕಚೇರಿಯಿಂದ ಹೊರ ನಡೆದರು. ಸಭೆಯಿಂದ ಎದ್ದು ಹೋದವರು ಮತ್ತೆ ಬರಲಿಲ್ಲ. ನಂತರ ಪೊಲೀಸರಿಗೆ ದೂರು ನೀಡಿರುವುದು ಗೊತ್ತಾಗಿದೆ. ಆದರೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರಿರುವುದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಮುಖಂಡರಾದ ಕುಮಾರ ನಾಯಕ, ಸುಬ್ಬೇಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement