ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜನಪ್ರತಿನಿಧಿಗಳಿಗೆ ತರಬೇತಿ

Rashmi Kasaragodu
Updated On : 8 Jul 2014, 1:57 am

ಮೈಸೂರು: ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ಆಯೋಜಿಸಿದೆ. ಜು.9 ರಿಂದ 11 ರವರೆಗೆ ಮೈಸೂರು ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿಗಳಿಗೆ ಎಟಿಐನ ನೇತ್ರಾವತಿ ನಿಲಯದಲ್ಲಿ ತರಬೇತಿ ಆಯೋಜಿಸಿದ್ದು, ಮೊದಲ ಹಂತವಾಗಿ ಮೇಯರ್ ಮತ್ತು ಉಪ ಮೇಯರ್ ಸೇರಿದಂತೆ 25 ಮಂದಿಯನ್ನು ಆಯ್ಕೆ ಮಾಡಿದೆ. ಜು.9ರ ಬೆಳಗ್ಗೆ 9.30ಕ್ಕೆ ಈ ತರಬೇತಿ ಆರಂಭ ಆಗುವುದು. ಈ ತರಬೇತಿಯಲ್ಲಿ ತುಮಕೂರು ಮತ್ತು ಮಂಗಳೂರು ನಗರ ಪಾಲಿಕೆಯ ಸದಸ್ಯರೂ ಭಾಗವಹಿಸುವರು.
ಯುವಕ ನಾಪತ್ತೆ
ಮೈಸೂರು: ಮೈಸೂರು ತಾಲೂಕು ವರುಣ ಹೋಬಳಿ ಸೋಮೇಶ್ವರಪುರ ಗ್ರಾಮದ ಲೇ. ಪುಟ್ಟಸ್ವಾಮಾಚಾರಿ ಎಂಬವರ ಪುತ್ರ ರಾಜೇಂದ್ರ (19) ನಾಪತ್ತೆಯಾಗಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಹರೆ- ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಚಂದ್ರು ಮೊ.94483 48734 ಅಥವಾ ಮೈಸೂರು ದಕ್ಷಿಣ ಠಾಣೆಯ ದೂ.0821- 2444955 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement