ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟ್ರ್ಯಾಕ್ಟರ್ ಸಾಲ ವಸೂಲಿ: ರೈತರಿಂದ ಬ್ಯಾಂಕ್ಗೆ ಮುತ್ತಿಗೆ

Rashmi Kasaragodu
Updated On : 8 Jul 2014, 1:58 am

ನಂಜನಗೂಡು: ಎಸ್ಬಿಐನವರು ಟ್ರ್ಯಾಕ್ಟರ್ ಸಾಲ ವಸೂಲಾತಿ ಸಂದರ್ಭದಲ್ಲಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕೃಷಿ ಮತ್ತು ಮಾಲೀಕರ ಹಿತಾಭಿವೃದ್ಧಿ ಸಂಘದಿಂದ ರೈತರು ಸೋಮವಾರ ಬ್ಯಾಂಕ್ ಮುಂಭಾಗ ಪ್ರತಿಭಟಿಸಿದರು. ಪಟ್ಟಣದ ಹುಲ್ಲಹಳ್ಳಿ ವೃತ್ತದಿಂದ ಬೃಹತ್ ಪಾದಯಾತ್ರೆ ಮೂಲಕ ಪಟ್ಟಣದ ಎಂಜಿಎಸ್ ರಸ್ತೆ, ಆರ್ಪಿ ರಸ್ತೆ ಮೂಲಕ ಪಾದಯಾತ್ರೆ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ವಿ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ಮಳೆಯಿಲ್ಲದೇ ಅಂತರ್ಜಲ ಕುಸಿದಿದೆ. ರೈತರು ಬೆಳೆದ ಫಸಲು ನಾಶವಾಗಿವೆ. ಬ್ಯಾಂಕಿನ ಸಾಲ ತೀರಿಸಲಾಗದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಂಜನಗೂಡು ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿ ನಷ್ಟವಾಗಿರುವ ರೈತರ ಫಸಲಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ರೈತರ ಮೇಲೆ ಬ್ಯಾಂಕಿನವರು ಹೂಡಿರುವ ಸಾಲ ವಸೂಲಾತಿ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತರು ಅರ್ಧ ಘಂಟೆಗೂ ಹೆಚ್ಚು ಕಾಲ ಘೋಷಣೆ ಕೂಗಿ ಬ್ಯಾಂಕ್ಗೆ ಮುತ್ತಿಗೆ ಹಾಕಿದರು. ಕೃಷಿ ಟ್ರ್ಯಾಕ್ಟರ್ ಮಾಲೀಕರ ರೈತ ಸಂಘದ ಅಧ್ಯಕ್ಷ ಶಿವನಾಗಪ್ಪ, ಹೊನ್ನೂರು ಎಚ್.ಎಂ. ಸಿದ್ದರಾಜು, ಮುಖಂಡರಾದ ಬಸವರಾಜಪ್ಪ, ಎಂ.ಮಹೇಶ್, ಅಳಗಂಚಿಪುರ ಮಹದೇವಸ್ವಾಮಿ, ನಾಗಪ್ಪ, ಹಾಡ್ಯ ರವಿ ಮಹದೇವಸ್ವಾಮಿ, ಮಹೇಶ, ರವಿ, ಚಿಕ್ಕಣ್ಣ, ವೀರಣ್ಣ, ಶಿವಕುಮಾರ್, ಕಾಳಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement