ಅಂತಾರಾಷ್ಟ್ರೀಯ ಮಾದರಿ ಕ್ರಿಕೆಟ್ಗೆ ಚಾಲನೆ
ಮೈಸೂರು: ಹಿರಿಯರ ಮತ್ತು 16 ವರ್ಷದೊಳಗಿನವರ ಅಂತಾರಾಷ್ಟ್ರೀಯ ಮಾದರಿಯ ಏಕದಿನ ಪಂದ್ಯ ಮತ್ತು ಟಿ20 ಕ್ರಿಕೆಟ್ ಪಂದ್ಯಕ್ಕೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು.
ನ್ಯೂಜಿಲೆಂಡ್ನ ಹಿರಿಯರ ಹವೇಕ್ಸ್ ಹಟ್, 16 ವರ್ಷದೊಳಗಿನವರ ತಂಡ ಮತ್ತು ಎಸ್ಎಕೆ- ಡಿವೈಇಎಸ್ ಕ್ರಿಕೆಟ್ ತಂಡಗಳು ಈ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಾವಳಿಯು ಎಸ್ಜೆಸಿಇ ಮೈದಾನ, ಗಂಗೋತ್ರಿ ಗ್ಲೇಡ್ಸ್, ಮಹಾರಾಜ ಕಾಲೇಜು ಮೈದಾನ ಮತ್ತು ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಶ್ರೀಗಂಧ ಕ್ರಿಕೆಟ್ ಕ್ಲಬ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೈಸೂರು ವಲಯ ಮತ್ತು ಸೈಕಲ್ ಬ್ರಾಂಡ್ ಅಗರಬತ್ತಿಯ ಸಂಯುಕ್ತ ಆಶ್ರಯದಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ವೇಳೆ ರಾಜ್ಯ ಕ್ರಿಕೆಟ್ ಸಂಸ್ಥೆ ಮೈಸೂರು ವಲಯದ ಸಂಚಾಲಕ ಕೆ.ಬಾಲಚಂದರ್, ಶ್ರೀಗಂಧ ಕ್ರಿಕೆಟರ್ಸ್ನ ಕಾರ್ಯದರ್ಶಿ ಎ.ಪಿ. ಭರತೇಶ್ ಇದ್ದರು.