ಪಾಲಿಟೆಕ್ನಿಕ್ ಮೆರಿಟ್ ಪಟ್ಟಿ ಪ್ರಕಟ ಇಂದು
ಮೈಸೂರು: ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ನಲ್ಲಿ 2014-15ನೇ ಸಾಲಿಗೆ ಐಟಿಐ ಲ್ಯಾಟರಲ್ ಎಂಟ್ರಿ ಮೂಲಕ ಮೂರನೆ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಜು.9ಕ್ಕೆ ಪ್ರಕಟಿಸಲಾಗುವುದು. ತಾತ್ಕಾಲಿಕ ಮೆರಿಟ್ ಪಟ್ಟಿಗೆ ಅಭ್ಯರ್ಥಿಗಳು ಜು.10ರ ಸಂಜೆ 5.30 ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಜು. 11ರ ಬೆಳಗ್ಗೆ 11ಕ್ಕೆ ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. ಜು.14 ರಂದು ಮೆರಿಟ್ ಸಂಖ್ಯೆ 1 ರಿಂದ 500 ವರೆಗೆ ಕೌನ್ಸೆಲಿಂಗ್, ಜು.15 ರಂದು 501 ರಿಂದ ಕೊನೆಯ ಮೆರಿಟ್ ತನಕ ಕೌನ್ಸೆಲಿಂಗ್ ನಡೆಸಲಾಗುವುದು. ಎರಡನೆ ಹಾಗೂ ಅಂತಿಮ ಸುತ್ತಿನ ಕೌನ್ಸೆಲಿಂಗನ್ನು ಜು.17ಕ್ಕೆ ನಡೆಸಲಾಗುವುದು. ಕೌನ್ಸೆಲಿಂಗ್ನ ಪ್ರಕ್ರಿಯೆಯನ್ನು ಮೆರಿಟ್, ಮೀಸಲಾತಿ ನಿಯಮಾನುಸಾರ ಸೀಟು ಹಂಚಿಕೆ ಮಾಡಲಾಗುವುದು 2 ವರ್ಷದ ಐಟಿಐ ಮುಗಿಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಮೆರಿಟ್ ಸಂಖ್ಯೆಗೆ ಅನುಗುಣವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಗೆ ಹಾಜರಾದ ಮಾತ್ರಕ್ಕೆ ಸೀಟಿನ ಖಾತ್ರಿ ಇರುವುದಿಲ್ಲ. ಮೆರಿಟ್ ಹಾಗೂ ಅನ್ವಯಿಸುವ ಮೀಸಲಾತಿ ಅನ್ವಯ ಸೀಟು ಹಂಚಿಕೆ ಮಾಡಲಾಗುವುದು. ಸೀಟು ಮುಗಿದರೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವುದು.