ಭಗವದ್ಗೀತೆ ಕಂಠಪಾಠ ಸ್ಪರ್ಧೆ
ಮೈಸೂರು: ನಗರದ ಶಾರದಾ ಆಪ್ಟಿಕಲ್ ಮಾಲೀಕರಾಗಿದ್ದ ದಿವಂಗತ ಎಚ್.ಎನ್. ಕೃಷ್ಣರಾವ್ ಕುಟುಂಬಸ್ಥರ ಸಹಯೋಗದಲ್ಲಿ ರಾಮಕೃಷ್ಣ ಸೇವಾ ಸಂಘವು ಜು.20ರ ಬೆಳಗ್ಗೆ 9.30ಕ್ಕೆ ರಾಮಕೃಷ್ಣನಗರದಲ್ಲಿರುವ ರಾಮಕೃಷ ವಿದ್ಯಾಕೇಂದ್ರದ ಶಾರದಾ ಸಭಾಂಗಣದಲ್ಲಿ ಎಚ್.ಎನ್. ಕೃಷ್ಣರಾವ್ ಸ್ಮಾರಕ ನಗರಮಟ್ಟದ ಅಂತರಶಾಲಾ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಏರ್ಪಡಿಸಿದೆ. ಶಾಲಾ ಮುಖ್ಯಸ್ಥರು ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಯಿಂದ ತಲಾ ಇಬ್ಬರು ಸ್ಪರ್ಧಿಗಳ ಹೆಸರನ್ನು ಜು.15ರೊಳಗೆ ರಾಮಕೃಷ್ಣ ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯರಿಗೆ ಕಳಿಸುವಂತೆ ಮನವಿ ಮಾಡಲಾಗಿದೆ. ಭಗವದ್ಗೀತೆಯ 9ನೇ ಅಧ್ಯಾಯದ 26 ರಿಂದ 31ನೇ ಶ್ಲೋಕದವರೆಗೆ ಒಟ್ಟು 6 ಶ್ಲೋಕಗಳನ್ನು ನಿಗದಿಗೊಳಿಸಲಾಗಿದ್ದು, ಕನ್ನಡ ಅರ್ಥಸಹಿತವಾಗಿ ಹೇಳಬೇಕು. ದೂ. 2462815 ಸಂಪರ್ಕಿಸಬಹುದು.