ಸುತ್ತೂರಲ್ಲಿ ಆಹಾರ ಕೌಶಲ ತರಬೇತಿ
ನಂಜನಗೂಡು: ಕೇಂದ್ರ ಸರ್ಕಾರದ ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ರಾಷ್ಟ್ರೀಯ ಸಂಸ್ಥೆ, ಹರಿಯಾಣದಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಹಾಗೂ ನಿರ್ವಹಣೆ ಸಂಸ್ಥೆ ಮತ್ತು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಆಹಾರ ಸಂಸ್ಕರಣೆಯಲ್ಲಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಆಸಕ್ತಿ ಇರುವವರಿಗಾಗಿ ಹತ್ತು ದಿನಗಳ ಕೌಶಲ ತರಬೇತಿ ಕಾರ್ಯಕ್ರಮವನ್ನು ಸುತ್ತೂರಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ನಿಫ್ಟೆಮ್ ಸಂಸ್ಥೆ ಪ್ರಾಧ್ಯಾಪಕ ಡಾ.ಎಸ್.ಕೆ. ಸಿಂಗ್ ಸೂರ್ಯವಂಶಿ ಮಾತನಾಡಿ, ಈ ತರಬೇತಿಯಲ್ಲಿ ಭಾಗವಹಿಸಿರುವ ಮಹಿಳೆಯರು ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿರುವ ಅನೇಕ ಅವಕಾಶಗಳ ಬಗ್ಗೆ ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು. ಆಹಾರ ಸಂಸ್ಕರಣೆಯಲ್ಲಿ ಉದ್ಯಮ ಪ್ರಾರಂಭಿಸಲು ತರಬೇತಿಯ ಅವಧಿಯಲ್ಲಿ ಉಪಯುಕ್ತ ಮಾಹಿತಿ ಮಾರ್ಗದರ್ಶನ ನೀಡಲಾಗುವುದು ಎಂದರು.
ಮುಖ್ಯ ಅತಿಥಿ ವಿಜ್ಞಾನಿ ಡಾ.ಎ.ಜಿ.ಎಸ್. ರೆಡ್ಡಿ ಮಾತನಾಡಿ, ಕಾಫಿ ಬೆಳೆಯ ಸಂಸ್ಕರಣೆಯ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಎಸ್.ಗ್ಲೋರಿ ಸ್ವರೂಪ ಅವರು ಕಾರ್ಯಕ್ರಮದ ಪರಿಚಯ ಮಾಡಿಕೊಟ್ಟರು. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಮುನಾ ಅರಸ್ ನಿರೂಪಿಸಿದರು. ನೇತ್ರಾವತಿ ಸ್ವಾಗತಿಸಿದರು. ಜೆ.ಜಿ.ರಾಜಣ್ಣ ವಂದಿಸಿದರು.