ಗಾಲಿ ಕುರ್ಚಿಗಳ ವಿತರಣೆ
ಮೈಸೂರು: ಪ್ಯಾಲಿಯೇಟಿವ್ ಕೇರ್, ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಮತ್ತು ಡೆವಲಪ್ಮೆಂಟ್ (ವಿ-ಲೀಡ್) ಸಂಸ್ಥೆಯು ಅಸೋಸಿಯೇಷನ್ ಫಾರ್ ಪೀಪಲ್ ವಿತ್ ಡಿಸೆಬಿಲಿಟಿಯ (ಎಪಿಡಿ) ಸಹಯೋಗದೊಂದಿಗೆ ವಿಕಲಾಂಗ ರೋಗಿಗಳಿಗೆ ವ್ಯವಸ್ಥಿತ ಮತ್ತು ಅನುದಾನದೊಂದಿಗೆ ಗಾಲಿ ಕುರ್ಚಿಗಳನ್ನು ವಿತರಿಸುವ ಸಮುದಾಯ ಆಧಾರಿತ ಕಾರ್ಯಕ್ರಮ ನಡೆಯಿತು. ಎಪಿಡಿ ಸಂಸ್ಥೆಯು ಹತ್ತು ಫಲಾನುಭವಿಗಳಿಗೆ ಗಾಲಿ ಕುರ್ಚಿಗಳನ್ನು ಜೋಡಿಸಿ ವಿತರಿಸಿತು. ಇದನ್ನು ಪಡೆದ ಇಬ್ಬರು ಫಲಾನುಭವಿಗಳಲ್ಲಿ, ಒಬ್ಬ ಪಾರ್ಶ್ವವಾಯು ಪೀಡಿತ ರೋಗಿಯಾಗಿದ್ದಲ್ಲಿ, ಮತ್ತೊಬ್ಬರು ಬೆನ್ನುಹುರಿಯ ಬಾಧೆಯಿಂದ ಬಳಲುತ್ತಿದ್ದರು. ಎಪಿಡಿ, ಬೆಂಗಳೂರಿನ ಮೂರು ಸದಸ್ಯರ ತಂಡ ವಿ-ಲೀಡ್ಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಿಕೊಟ್ಟರು.