ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುರುಪೂರ್ಣಿಮ ನಾಳೆ, ನಾಡಿದ್ದು

Rashmi Kasaragodu
Updated On : 11 Jul 2014, 1:21 am

ಮೈಸೂರು: ಸುಬ್ರಹ್ಮಣ್ಯನಗರದಲ್ಲಿರುವ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿ ಜು.12 ಮತ್ತು 13 ರಂದು ಸಂಜೆ 6 ರಿಂದ 9 ರವರೆಗೆ ಹೋಮ, ಭಜನೆ, ಆರಾಧನೆ, ಸಾಮೂಹಿಕ ಗ್ರಹದೋಷ ನಿವಾರಣೆ, ಲಕ್ಷ್ಮೀಪೂಜೆ, ಪುಷ್ಪಾರ್ಚನೆ, ಸಾಯಿ ಕಳಸ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ ಸೇರಿದಂತೆ ಮುಂತಾದ ಪೂಜಾ ಕೈಂಕರ್ಯಗಳು ಜರುಗಲಿವೆ. ಬೋಗಾದಿಯ ಆಯಿಷ್ ಕಾಲೋನಿಯಲ್ಲಿರುವ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾದಲ್ಲಿ ಜು. 12ರ ಸಂಜೆ 5.30ಕ್ಕೆ ಶ್ರೀ ಗುರುಪೂರ್ಣಿಮ ಆಚರಣೆ ಏರ್ಪಡಿಸಲಾಗಿದೆ. ಯಾದವಗಿರಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ಜು.12 ರಂದು ಗುರು ಪೂರ್ಣಿಮೆ ಆಚರಣೆ ಏರ್ಪಡಿಸಿದ್ದು, ಪೂಜಾ ಕೈಂಕರ್ಯಗಳು ನೆರವೇರಲಿವೆ.



ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಮೈಸೂರು: ಉತ್ತರ ಪ್ರದೇಶದಲ್ಲಿ ಮೂವರು ದಲಿತ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ದಸಂಸ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟಿಸಿದರು. ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆಯೂ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಕೊಡಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸೋತಿದೆ. ಆದ್ದರಿಂದ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್, ಬೆಟ್ಟಯ್ಯಕೋಟೆ, ರತ್ನಪುರಿ ಪುಟ್ಟಸ್ವಾಮಿ, ಶಂಭುಲಿಂಗಸ್ವಾಮಿ, ಶಿವಣ್ಣ, ಶಿವಬುದ್ಧಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement