ತಾಪಂ ಅಧ್ಯಕ್ಷರಾಗಿ ಸದಾನಂದ ಆಯ್ಕೆ
ಹುಣಸೂರು: ಹುಣಸೂರು ತಾಪಂ ಅಧ್ಯಕ್ಷರಾಗಿ ಜೆಡಿಎಸ್ನ ಸದಾನಂದ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ಜಯಂತಿ ಅವರು ಅವಿರೋಧವಾಗಿ ಆಯ್ಕೆಯಾದರು.
ತಾಪಂನಲ್ಲಿ ಕಾಂಗ್ರೆಸ್ 3, ಬಿಜೆಪಿ 7 ಮತ್ತು ಜೆಡಿಎಸ್ 11 ಸೇರಿ ಒಟ್ಟು 21 ಸದಸ್ಯರಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ 19 ಮಂದಿ ಹಾಜರಾಗಿ, ಬಿಜೆಪಿಯ ಕೆ.ಎಸ್.ಕುಮಾರ್, ಯಶೋದಮ್ಮ, ಜೆಡಿಎಸ್ನ ವೆಂಕಟೇಶ್ ಸೇರಿ ಮೂರು ಮಂದಿ ಗೈರುಹಾಜರಾದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗುತ್ತಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಜೈಕಾರ ಹಾಕಿದರು.