ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೂರ್ವಜ್ ವಿರುದ್ಧ ಎಫ್ಐಆರ್

Rashmi Kasaragodu
Updated On : 11 Jul 2014, 1:20 am

ಮೈಸೂರು: ಮಾಜಿ ಸಂಸದ ಎಚ್.ವಿಶ್ವನಾಥ್ ಪುತ್ರ ಪೂರ್ವಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದರು. ಹಳ್ಳಿಮನೆ ಹೋಟೆಲ್ ವಿರುದ್ಧ ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ನೀಡಿದ ದೂರು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೂರ್ವಜ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೋಟೆಲ್ನ ಸಿಸಿಟಿವಿ ಕಳೆದ ಹದಿನೈದು ದಿನಗಳಿಂದ ಕೆಲಸ ಮಾಡುತ್ತಿಲ್ಲ. ಸ್ಥಳದಲ್ಲಿದ್ದವರ ಸಾಕ್ಷಿ ತೆಗೆದುಕೊಳ್ಳಲಾಗುತ್ತಿದೆ. ಪ್ರಕರಣದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಖರೆ ಸ್ಪಷ್ಟಪಡಿಸಿದರು. ಊಟಕ್ಕೆ ಹೋದಾಗ ಜಗಳ ಆಗಿದೆ ಎಂಬ ಜೊತೆಗೆ ಪೂರ್ವಜ್ ಅಥವಾ ಹೋಟೆಲ್ ಮಾಲೀಕನ ನಡುವಿನ ಹಣಕಾಸು ವಿಷಯಕ್ಕೆ ಗಲಾಟೆ ಆಗಿದೆ ಎಂಬ ಅನುಮಾನ ಇದೆ. ತನಿಖೆಯಿಂದಷ್ಟೆ ನಿಜ ವಿಷಯ ತಿಳಿಯಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 143, 504, 506, 323, 436 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement